Categories: CrimeLatest

ಅಕ್ರಮ ಸಂಬಂಧ ಆರೋಪ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗುಂಪು ಹಲ್ಲೆ – ಐವರು ಬಂಧನ

ಬೆಂಗಳೂರು ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಹಿನ್ನೆಲೆ ಯುವತಿಯೊಬ್ಬಳ ಮೇಲೆ ಗುಂಪು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೂರು ಮಹಿಳೆಯರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬಂಧಿತರನ್ನು ಪಶ್ಚಿಮ ಬಂಗಾಳ ಮೂಲದ ಬಾಪೂನ್ (36), ಸುಕ್ಷಹರ್ ಖಾತೂನ್ (44), ಸೀಮಾ ಧಫರ್ (32), ಅಸುರಾ ಖಾತೂನ್ (32) ಮತ್ತು ಫಟಯ್ ಧಾಪ್ಟರ್ (32) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ಜಮ್ಮಿದ್, ಟುಕೋನ್ ಮತ್ತು ನೂರ್ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಘಟನೆ ವಿವರ

ಸಂತ್ರಸ್ತ 20 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಹಾಗೂ ಯುವತಿ ಎಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಮೀಪದ ಕಾರ್ಮಿಕರ ಶೆಡ್‌ನಲ್ಲಿ ವಾಸವಾಗಿದ್ದ ಇವರು, ಯುವತಿ ಮಾತ್ರ ಪ್ರತ್ಯೇಕವಾಗಿ ವಾಸವಾಗಿದ್ದಳು.

ಯುವತಿ ಬೇರೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ, ಆರೋಪಿಗಳು ಆಕೆಯನ್ನು ಪದೇ ಪದೇ ನಿಂದಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ಬಳಿಕವೂ, ಇತ್ತೀಚೆಗೆ ಆರೋಪಿಗಳ ಪೈಕಿ ಮೂವರು ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದರು. ಹಿಂಬಾಲಿಸಬೇಡಿ ಎಂದು ಯುವತಿ ಎಚ್ಚರಿಕೆ ನೀಡಿದ್ದರೂ, ಅವರು ಕಿರುಕುಳ ಮುಂದುವರಿಸಿದ್ದಾರೆ.

ದಾಳಿ ಮತ್ತು ಬೆದರಿಕೆ

ಏಪ್ರಿಲ್ 3ರಂದು ರಾತ್ರಿ ಸುಮಾರು 9.30ರ ವೇಳೆಗೆ ಆರೋಪಿಗಳು ಏಕಾಏಕಿ ಶೆಡ್‌ಗೆ ನುಗ್ಗಿ, ದೊಣ್ಣೆ ಸೇರಿದಂತೆ ಇತರೆ ವಸ್ತುಗಳಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. “ಬೆಂಗಳೂರುದಲ್ಲಿ ಇರಲು ಬಿಡುವುದಿಲ್ಲ, ಇದ್ದರೂ ಜೀವಂತವಾಗಿ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ.

ಈ ವೇಳೆ ಯುವತಿಯನ್ನು ರಕ್ಷಿಸಲು ಬಂದ ಆಕೆಯ ಸ್ನೇಹಿತ ರಿಯಾಜ್ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಕ್ರಮ

ಪ್ರಕರಣ ದಾಖಲಿಸಿಕೊಂಡ ವರ್ತೂರು ಪೊಲೀಸರು ಐವರನ್ನು ಬಂಧಿಸಿದ್ದು, ಪರಾರಿಯಾಗಿರುವ ಮೂವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಜೊತೆಗೆ, ಘಟನೆಯ ವೇಳೆ ಇದ್ದ ರಿಯಾಜ್ ಎಂಬಾತನ ಪತ್ತೆ ಕಾರ್ಯವೂ ನಡೆಯುತ್ತಿದೆ.

ಪ್ರಾಥಮಿಕ ವಿಚಾರಣೆಯಲ್ಲಿ, “ಯುವತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಮಾಹಿತಿ ಇದ್ದು, ಅದನ್ನು ನಿಲ್ಲಿಸುವಂತೆ ಎಚ್ಚರಿಸಿದ್ದೇವೆ. ಆದರೂ ಮುಂದುವರಿಸಿದ್ದರಿಂದ ಕೋಪಗೊಂಡು ಹಲ್ಲೆ ನಡೆಸಿದ್ದೇವೆ” ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಈ ಘಟನೆ ವೈಯಕ್ತಿಕ ವಿಷಯಗಳನ್ನು ನೆಪವಿಟ್ಟು ಗುಂಪು ಹಿಂಸೆಗೆ ಇಳಿಯುವ ಅಪಾಯಕಾರಿ ಪ್ರವೃತ್ತಿಯನ್ನು ತೋರಿಸುವುದರೊಂದಿಗೆ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಭ್ರಷ್ಟರ ಬೇಟೆ

Recent Posts

2 ಲಕ್ಷ ಲಂಚ ಬೇಡಿಕೆ: ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್‌ಗೆ ಲಂಚ ಬೇಡಿಕೆ ಇಟ್ಟ ಆರೋಪದಡಿ ಲೋಕಾಯುಕ್ತರ…

43 minutes ago

15 ನಿಮಿಷದಲ್ಲಿ ಕಾಣೆಯಾದವಳು,1500 ಅಡಿ ಆಳದಲ್ಲಿ ಪತ್ತೆ: ಶ್ರೀನಂದಾ ಸಾವು ಹೇಗಾಯ್ತು?

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾಗಿದ್ದ ಘಟನೆ…

3 hours ago

ತಡರಾತ್ರಿ ಭೀಕರ ಅಪಘಾತ: ಸಹ ಕಲಾವಿದ ಹರೀಶ್ ಸ್ಥಳದಲ್ಲೇ ಸಾವು

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ…

3 hours ago

‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 15.45 ಕೋಟಿ ದೋಚಿದ ವಂಚಕರು: ಉದ್ಯಮಿಗೆ ಸಿಬಿಐ ಹೆಸರಿನಲ್ಲಿ ಬಲೆ

ರಾಜ್ಯದಲ್ಲಿ ದಿನೇ ದಿನೇ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಉದ್ಯಮಿಯೊಬ್ಬರನ್ನು ಭಯಭೀತಿಗೊಳಿಸಿ 15 ಕೋಟಿ…

3 hours ago

ವಿಡಿಯೋ ಕಾಲ್ ಮಧ್ಯೆ ಆತ್ಮಹತ್ಯೆ: ಪ್ರೇಮ ವೈಫಲ್ಯದಿಂದ ಯಲಹಂಕದಲ್ಲಿ ಯುವಕನ ದುರ್ಮರಣ

ಪ್ರೀತಿ ಹೆಸರಿನಲ್ಲಿ ವಂಚನೆ ಆರೋಪದ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಅಟ್ಟೂರು…

3 hours ago

ಪ್ರೇಮ ವೈಫಲ್ಯದಿಂದ ಯುವಕನ ಆತ್ಮಹತ್ಯೆ: ವಾಟ್ಸಪ್ ಚಾಟ್‌ಗಳಿಂದ ಶಾಕ್ ನೀಡಿದ ಸತ್ಯ ಬಯಲು

ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ದೂರವಾದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ಮೂಡುಶೆಡ್ಡೆ…

4 hours ago