Categories: JobsLatest

ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ SSR ನೇಮಕಾತಿ: ಅರ್ಜಿ ಆಹ್ವಾನ

ಭಾರತೀಯ ಸಶಸ್ತ್ರ ಪಡೆಗಳ ಪ್ರಮುಖ ಘಟಕವಾದ ಭಾರತೀಯ ನೌಕಾಪಡೆಯು 2027ರ ಜನವರಿ ಮತ್ತು ಫೆಬ್ರವರಿ ಬ್ಯಾಚ್‌ಗಳಿಗಾಗಿ ‘ಅಗ್ನಿವೀರ್ ಸೀನಿಯರ್ ಸೆಕೆಂಡರಿ ರಿಕ್ರೂಟ್‌ಮೆಂಟ್ (SSR)’ ಹುದ್ದೆಗಳ ಅಧಿಸೂಚನೆ ಪ್ರಕಟಿಸಿದೆ. ದೇಶದಾದ್ಯಂತ ಇರುವ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ಏಪ್ರಿಲ್ 6ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಹತೆ ಮತ್ತು ವಯೋಮಿತಿ:
ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದಲ್ಲದೆ, ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ವಿಭಾಗದಲ್ಲಿ ಡಿಪ್ಲೊಮಾ ಅಥವಾ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದವರಿಗೂ ಅವಕಾಶ ಇದೆ. ಜನವರಿ 2027 ಬ್ಯಾಚ್‌ಗೆ ಡಿಸೆಂಬರ್ 2004 ರಿಂದ ಮೇ 2009ರ ನಡುವೆ ಜನಿಸಿದವರು ಹಾಗೂ ಫೆಬ್ರವರಿ 2027 ಬ್ಯಾಚ್‌ಗೆ ಮೇ 2005 ರಿಂದ ಅಕ್ಟೋಬರ್ 2009ರ ನಡುವೆ ಜನಿಸಿದವರು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲಿಗೆ ಮೇ ತಿಂಗಳಲ್ಲಿ ನಡೆಯುವ ಭಾರತೀಯ ನೌಕಾಪಡೆಯ ಪ್ರವೇಶ ಪರೀಕ್ಷೆ (INET) ನಡೆಯಲಿದೆ. ಇದು 100 ಅಂಕಗಳ ಲಿಖಿತ ಪರೀಕ್ಷೆಯಾಗಿದ್ದು, ಇಂಗ್ಲಿಷ್, ವಿಜ್ಞಾನ, ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯಗಳಿಂದ ಪ್ರಶ್ನೆಗಳು ಕೇಳಲಾಗುತ್ತವೆ. ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಂತಿಮ ಆಯ್ಕೆ ನಡೆಯುತ್ತದೆ.

ತರಬೇತಿ ಮತ್ತು ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಡಿಶಾದ INS ಚಿಲ್ಕಾದಲ್ಲಿ ತರಬೇತಿ ನೀಡಲಾಗುತ್ತದೆ. ಆರಂಭಿಕವಾಗಿ ತಿಂಗಳಿಗೆ ₹30,000 ಸಂಬಳ ನೀಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತದೆ. ಸಂಬಳದ ಒಂದು ಭಾಗವನ್ನು ‘ಅಗ್ನಿವೀರ್ ಕಾರ್ಪ್ಸ್ ನಿಧಿ’ಗೆ ಮೀಸಲಿಡಲಾಗುತ್ತದೆ. ನಾಲ್ಕು ವರ್ಷಗಳ ಸೇವೆಯ ಬಳಿಕ ‘ಸೇವಾ ನಿಧಿ’ ಯೋಜನೆಯಡಿ ಸುಮಾರು ₹10.04 ಲಕ್ಷ ರೂ.ಗಳ ಮೊತ್ತ ನೀಡಲಾಗುತ್ತದೆ.

ಭ್ರಷ್ಟರ ಬೇಟೆ

Recent Posts

ಅಥಣಿ ತಾಲೂಕಿನಲ್ಲಿ ಹದಗೆಟ್ಟ ರಸ್ತೆ: ಯಲಿಹಡಲಗಿ–ಅಡಹಳಟ್ಟಿ ಮಾರ್ಗದಲ್ಲಿ ಜನರ ಆಕ್ರೋಶ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ–ಅಡಹಳಟ್ಟಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು, ತೆಗ್ಗು-ಗುಂಡಿಗಳಿಂದ ತುಂಬಿಕೊಂಡಿದೆ. ರಸ್ತೆಯ ದುಸ್ಥಿತಿಯಿಂದ ಬೈಕ್ ಸವಾರರು…

10 hours ago

ಅರ್ಧಕ್ಕೆ ನಿಂತ ಶೌಚಾಲಯ, ಮೂತ್ರದ ದುರ್ವಾಸನೆ: ಅಥಣಿಯಲ್ಲಿ ಸಾರ್ವಜನಿಕರ ಆಕ್ರೋಶ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬೆನ್ನಿಪೇಟೆಯ ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗದಲ್ಲಿ, ಜಿ ಮಾರ್ಟ್ ಎದುರಿನ ಪ್ರದೇಶದಲ್ಲಿ ಗಂಭೀರ ಸ್ವಚ್ಛತಾ ಸಮಸ್ಯೆ…

10 hours ago

‘ನೀಲಿ ಡ್ರಮ್’ ಭೀತಿ: ಪತ್ನಿಯ ಬೆದರಿಕೆಗೆ ಹೆದರಿ ಆಕೆಯನ್ನು ಪ್ರಿಯಕರನ ಜೊತೆ ಕಳುಹಿಸಿದ ಪತಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ‘ನೀಲಿ ಡ್ರಮ್’ ಎಂಬ ಪದ ಕ್ರೌರ್ಯದ ಸಂಕೇತವಾಗಿ ಹರಿದಾಡುತ್ತಿದೆ. ಇದೇ ಭೀತಿಯ ನಡುವೆ, ಉತ್ತರ…

11 hours ago

‘ಧುರಂಧರ್: ದಿ ರಿವೆಂಜ್’ಗೆ ನಟಿ ರಮ್ಯಾ ಕಟು ಟೀಕೆ: “ಹಣ, ಸಮಯ ವ್ಯರ್ಥ ಮಾಡಿಕೊಳ್ಳಬೇಡಿ”

‘ಧುರಂಧರ್: ದಿ ರಿವೆಂಜ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ನಟಿ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ…

11 hours ago

‘ಫಸ್ಟ್ ನೈಟ್’ ನಿರಾಕರಣೆ: ಪತಿ ವಿರುದ್ಧ ಮಹಿಳೆಯ ದೂರು, ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ

ಬೆಂಗಳೂರು ನಗರದಲ್ಲಿ ದಿನೇದಿನೇ ವಿಭಿನ್ನ ಸ್ವರೂಪದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇತ್ತೀಚೆಗೆ ಮತ್ತೊಂದು ಅಸಾಮಾನ್ಯ ಘಟನೆ ಗಮನ ಸೆಳೆದಿದೆ. ಮದುವೆಯಾದ…

11 hours ago

ಲಂಚ ಸ್ವೀಕರಿಸುವಾಗ ದಾಳಿ – ಕಾರಿನಲ್ಲಿ ಪರಾರಿಯಾಗುತ್ತಿದ್ದ ಅಧಿಕಾರಿಯನ್ನು ಬೆನ್ನತ್ತಿ ಬಂಧಿಸಿದ ಲೋಕಾಯುಕ್ತ

ಕೋಲಾರದಲ್ಲಿ ಲಂಚ ಸ್ವೀಕರಿಸುವ ವೇಳೆ ನಡೆದ ಲೋಕಾಯುಕ್ತ ದಾಳಿ ಸಿನಿಮೀಯ ತಿರುವು ಪಡೆದುಕೊಂಡಿದ್ದು, ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿ…

1 day ago