ಬೆಂಗಳೂರು, ಆಗಸ್ಟ್ 1: ಬಿಗ್ ಬಾಸ್ ವಿಜೇತ ಮತ್ತು ‘ಒಳ್ಳೆ ಹುಡುಗ’ ಖ್ಯಾತಿಯ ನಟ ಪ್ರಥಮ್ ಇದೀಗ ತೀವ್ರ ವಿವಾದದ ಕಳ್ಳಕತ್ತಲೆಯಲ್ಲಿ ಸಿಲುಕಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ನೀಡಿದ ವಿವಾದಾಸ್ಪದ ಹೇಳಿಕೆಯಿಂದಾಗಿ, ಅಂಬೇಡ್ಕರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಚಿತ್ರರಂಗದಿಂದ ಈ ನಟನನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
‘ಅಖಿಲ ಭಾರತ ಅಬ್ದುಲ್ ಕಲಾಂ ಅಸೋಶಿಯೇಶನ್’ ಹಾಗೂ ‘ದಲಿತ ಸಂಘರ್ಷ ಸಮಿತಿ, ಜಯನಗರ’ದ ಸದಸ್ಯರು ಈ ಸಂಬಂಧವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ, ನಟ ಪ್ರಥಮ್ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಅವರು ಸಲ್ಲಿಸಿರುವ ದೂರಿನಲ್ಲಿ, ಪ್ರಥಮ್ ಅವರು ಅಂಬೇಡ್ಕರ್ ಅವರ ಬಗ್ಗೆ “ಸ್ವರ್ಗಕ್ಕೆ ಹೋಗಿ ಅವರನ್ನು ಭೇಟಿಯಾಗಬೇಕು” ಹಾಗೂ “ಅವರು ರಚಿಸಿದ ಸಂವಿಧಾನದಲ್ಲಿ ಕೆಲ ಲೂಪ್‌ಹೋಲ್‌ಗಳಿವೆ” ಎಂಬ ಅರ್ಥ ನೀಡುವ ಮಾತುಗಳನ್ನು ಬಳಸಿದ್ದನ್ನು ಉಲ್ಲೇಖಿಸಲಾಗಿದೆ. ಇದು ಅಂಬೇಡ್ಕರ್ ಅವರ ಭಾವನೆಗೆ ಅವಮಾನವಾಗಿದ್ದು, ಸಂವಿಧಾನ ಶಿಲ್ಪಿಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
“ಅಂಬೇಡ್ಕರ್ ಅವರನ್ನು ಪ್ರಥಮ್ ಹೇಗೆ ಹೋಲಿಸುತ್ತಾರೆ? ಅವರು ಸಾವಿರ ಪಟ್ಟು ಮೇಲ್ಮಟ್ಟದ ವ್ಯಕ್ತಿತ್ವ ಹೊಂದಿದ್ದಾರೆ. ಪ್ರಥಮ್ ಅವರೇನು ಮಾತನಾಡುತ್ತಿದ್ದಾರೆ ಎಂಬ ಬುದ್ಧಿ ಇಲ್ಲದ ಮಾತು” ಎಂದು ಸಂಘದ ಸದಸ್ಯರು ಕಿಡಿಕಾರಿದ್ದಾರೆ.
ಇಂತಹ ಹೇಳಿಕೆಗಳನ್ನು ನೀಡಿದ ನಟನಿಗೆ ಸಿನಿಮಾ ಹಾಗೂ ಟಿವಿ ಕ್ಷೇತ್ರದಲ್ಲಿ ಯಾವುದೇ ಅವಕಾಶ ನೀಡಬಾರದು, ಅವರನ್ನೆ ತಾತ್ಕಾಲಿಕವಾಗಿ ಬ್ಲಾಕ್ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಪ್ರಥಮ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯನ್ನು ಸಂಘಟನೆಗಳು ವಾಣಿಜ್ಯ ಮಂಡಳಿಗೆ ಸಲ್ಲಿಸಿವೆ.
ಈ ಪ್ರಕರಣದಿಂದಾಗಿ ನಟ ಪ್ರಥಮ್‌ಗೆ ಮತ್ತೊಮ್ಮೆ ವಿವಾದದ ನಂಟು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ದಿಕ್ಕು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…