Categories: CorruptionLatest

ಹಳಿಯಾಳ ಸಬ್ ಜೈಲ್‌ನಲ್ಲಿ ₹60 ಸಾವಿರ ಲಂಚ ಬೇಡಿಕೆ ಆರೋಪ: ಲೋಕಾಯುಕ್ತ ದಾಳಿ, ಜೈಲರ್ ವಿರುದ್ಧ ತನಿಖೆ

ಹಳಿಯಾಳ ತಾಲೂಕಿನ ಉಪ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈಲರ್ ವಿರುದ್ಧ ಲಂಚ ಬೇಡಿಕೆಯ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮೂಲಗಳ ಪ್ರಕಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿಯೊಬ್ಬರು ಜೈಲಿನಲ್ಲಿ ಕೆಲಸ ಮಾಡಿ ಗಳಿಸಿದ ಹಣವನ್ನು ಪಡೆಯಲು ಮುಂದಾದಾಗ, ಸಂಬಂಧಪಟ್ಟ ಜೈಲರ್ ₹60 ಸಾವಿರ ಲಂಚ ಕೇಳಿದ್ದಾನೆ ಎನ್ನಲಾಗಿದೆ. ಈ ಘಟನೆಗೆ ಬೇಸತ್ತ ಆ ವ್ಯಕ್ತಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾನೆ.

ದೂರು ಆಧರಿಸಿ ಗುರುವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಹಳಿಯಾಳ ಸಬ್ ಜೈಲ್‌ಗೆ ದಾಳಿ ನಡೆಸಿ, ಹಲವು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಈ ವೇಳೆ ಜೈಲರ್ ಬಳಿಯಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡು, ಡಿಜಿಟಲ್ ಹಣ ವರ್ಗಾವಣೆ ಸಂಬಂಧಿತ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.

ತನಿಖೆಯ ವೇಳೆ, ಜೈಲರ್ ಹಣವನ್ನು ನೇರವಾಗಿ ಸ್ವೀಕರಿಸುವ ಬದಲು ಮಧ್ಯವರ್ತಿಗಳ ಮೂಲಕ ಪಡೆಯಲು ಯತ್ನಿಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಕೆಲ ಹಣ ವರ್ಗಾವಣೆಯ ದಾಖಲೆಗಳೂ ಅಧಿಕಾರಿಗಳ ಗಮನಕ್ಕೆ ಬಂದಿವೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದ್ದು, ಮತ್ತಷ್ಟು ವ್ಯಕ್ತಿಗಳ ಪಾತ್ರವಿದೆಯೇ ಎಂಬುದನ್ನೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮುಂದಿನ ಕ್ರಮಗಳ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಭ್ರಷ್ಟರ ಬೇಟೆ

Recent Posts

ಜಾತ್ಯಾತೀತ ಸೌಹಾರ್ದತೆಗೆ ಸಾಕ್ಷಿಯಾದ ಹರಾಳು ಅಡ್ಡಪಲ್ಲಕ್ಕಿ ಮಹೋತ್ಸವ; ಧರ್ಮಸಭೆಯಲ್ಲಿ ಉಜ್ಜಯಿನಿ ಶ್ರೀ ಜಗದ್ಗುರುಗಳಿಂದ ಆಶೀರ್ವಚನ.

ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ದಿನಾಂಕ 02-04-2026 ಗುರುವಾರದಂದು ಆಗಮಿಸಿದ ಶ್ರೀ ಉಜ್ಜಯಿನಿ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಸಮ್ಮಳ ವಾದ್ಯ,…

3 hours ago

ಮದುವೆಗೆ ವಿರೋಧ: ಚಾಮರಾಜನಗರದಲ್ಲಿ ಪ್ರೇಮಿಗಳ ದಾರುಣ ಅಂತ್ಯ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದು ಪ್ರೇಮಿಗಳಿಬ್ಬರು…

6 hours ago

ಕಲಬುರ್ಗಿಯಲ್ಲಿ ಮಾಜಿ ಸಚಿವರ ಅಳಿಯನ ಬರ್ಬರ ಹತ್ಯೆ

ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ಪಿ & ಟಿ ಕಾಲೊನಿಯಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ವ್ಯಕ್ತಿಯೊಬ್ಬರನ್ನು…

7 hours ago

ಭಾರತದಲ್ಲಿ ಹೆಚ್ಚುತ್ತಿರುವ ‘ಅನೈತಿಕ ಸಂಬಂಧದ’ ಟ್ರೆಂಡ್: ಬೆಂಗಳೂರೇ ನಂ.1!

ಭಾರತದಲ್ಲಿ ವಿವಾಹವನ್ನು ಪವಿತ್ರ ಬಂಧ ಹಾಗೂ ಜೀವನಪರ್ಯಂತದ ಬದ್ಧತೆ ಎಂದು ಪರಿಗಣಿಸುವ ಪರಂಪರೆ ಇನ್ನೂ ಗಟ್ಟಿಯಾಗಿ ಇದೆ. ಆದರೆ ಇತ್ತೀಚಿನ…

7 hours ago

ರಾಘವ್ ಚಡ್ಡಾಗೆ ಎಎಪಿಯಿಂದ ದೊಡ್ಡ ಶಾಕ್: ರಾಜ್ಯಸಭೆಯಲ್ಲಿ ಮಾತನಾಡುವಂತಿಲ್ಲ ಮತ್ತು ಉಪನಾಯಕ ಸ್ಥಾನದಿಂದ ವಜಾ.

ಆಮ್ ಆದ್ಮಿ ಪಕ್ಷ (AAP) ತನ್ನ ರಾಜ್ಯಸಭಾ ಸಂಸದ Raghav Chadha ಅವರಿಗೆ ದೊಡ್ಡ ಹಿನ್ನಡೆ ನೀಡಿದ್ದು, ಅವರನ್ನು ರಾಜ್ಯಸಭಾ…

20 hours ago

“ನೀನು ತುಂಬಾ ಸುಂದರವಾಗಿದ್ದೀಯಾ, ನಿನ್ನ ಮಗಳು ಸುಂದರವಾಗಿರಬೇಕು. ಆಕೆಯನ್ನು ನನ್ನ ಮನೆಗೆ ಕಳುಹಿಸು, 10 ಸಾವಿರ ಕೊಡುತ್ತೇನೆ- ಕಾಮುಕ ಎ.ಎಸ್.ಐ ಬೇಡಿಕೆಗೆ ದಂಗಾದ ಮಹಿಳೆ

“ರಕ್ಷಕನೇ ಭಕ್ಷಕ” ಎನ್ನುವ ಮಾತಿಗೆ ಸಾಕ್ಷಿಯಂತ ಘಟನೆಯೊಂದು Akolaದಲ್ಲಿ ಬೆಳಕಿಗೆ ಬಂದಿದೆ. ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಒಬ್ಬರು ವಶದಲ್ಲಿದ್ದ…

2 days ago