ದಿ 1/10/2022 ರಂದು ಬೆಳಗಿನ ಜಾವ KA 47/1207 ಈ ನಂಬರಿನ ಪ್ಯಾಸೆಂಜರ್ ಟೆಂಪೋ ಅನಂತವಾಡಿಯಿಂದ ಭಟ್ಕಳಕ್ಕೆ ಪ್ರಯಾಣಿಸುತ್ತಿರುತ್ತದೆ. ಈ ಟೆಂಪೋ ಚಾಲಕ (ರಾಮಚಂದ್ರ ಗೌಡ) ರಸ್ತೆ ಮಧ್ಯದಲ್ಲಿ ಕೈ ಮಾಡಿದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿರುವಾಗ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66 ತೆರನಮಕ್ಕಿ ಹೆದ್ದಾರಿ ಪಕ್ಕದಲ್ಲಿ ಒಬ್ಬ ಮಹಿಳಾ ಪ್ಯಾಸೆಂಜರರನ್ನು ಟೆಂಪೋದಲ್ಲಿ ಹತ್ತಿಸಿಕೊಂಡು ನಿಧಾನವಾಗಿ ಟೆಂಪೋ ಚಲಾಯಿಸುತ್ತಿರುವಾಗ ಅದೇ ಮಾರ್ಗದಲ್ಲಿ ಅನಂತವಾಡಿಯಿಂದ ಭಟ್ಕಳ ಕಡೆ ತೆರಳುತ್ತಿದ್ದ k s r t c ಬಸ್ಸ್ ನಂಬರ್ KA 01/F9088 ಈ ಬಸ್ ಚಾಲಕ (ಪ್ರಸಾದ ಯು ಬಂಗೇರ) ಈತನು k s r t c ಬಸ್ಸನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಬಸ್ ಚಲಾಯಿಸಿಕೊಂಡು ಭಟ್ಕಳ ಕಡೆ ತೆರಳುತ್ತಿದ್ದ ಸದರಿ ಟೆಂಪೋಗೆ ಹಿಂದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಪ್ಯಾಸೆಂಜರ್ ಟೆಂಪೋದಲ್ಲಿನ 19 ಜನರಿಗೆ ಹಾಗೂ k s r t c ಬಸ್ಸಿನಲ್ಲಿದ್ದ ಒಬ್ಬ ಮಹಿಳಾ ಪ್ರಯಾಣಿಕರಿಗೆ ಗಾಯ. ಹಾಗೂ ಸದರಿ ಟೆಂಪೋ ಚಾಲಕ ರಾಮಚಂದ್ರ ರವರು ಕೂಡಲೇ ಮುರ್ಡೇಶ್ವರ ಪೊಲೀಸ್ ಠಾಣೆಗೆ ವಿಷಯ ತಿಳಿಸಿ ದೂರು ದಾಖಲಿಸುತ್ತಾರೆ . ವಿಷಯ ತಿಳಿದ ಮುರ್ಡೇಶ್ವರ ಪೋಲಿಸ ಠಾಣೆಯ ಕಾನೂನು ಮತ್ತು ಸೂ ವ್ಯವಸ್ತೆಯ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಪರಮಾನಂದ ಬಿ ಕುಮಾರ್ ರವರು ದೂರು ದಾಖಲಿಸಿಕೊಂದು ಕಾನೂನು ಕ್ರಮ ಜರುಗಿಸಿದ್ದಾರೆ ..

ವರದಿ: ಶ್ರೀಪಾದ್ ಹೆಗಡೆ

Related News

error: Content is protected !!