ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬರುವ ಬನವಾಸಿಯಲ್ಲಿ ಸಾಕಷ್ಟು ಜನರು ಜಾನುವಾರುಗಳನ್ನು ಅವಲಂಬಿಸಿ ತಮ್ಮ ಕೃಷಿ ಕಾರ್ಯಗಳಿಗೆ ದಿನನಿತ್ಯ ಹಾಲು ಮಾರಾಟ ಮಾಡುವುದು ಹಾಗೂ ಗೊಬ್ಬರ ಮುಂತಾದವುಗಳನ್ನು ಜಾನುವಾರುಗಳಿಂದ ಪಡೆದು ಬಡ ಕುಟುಂಬಗಳು ಜೀವನವನ್ನು ಸಾಗಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಿರಸಿಯ ಬನವಾಸಿಯಲ್ಲಿ ಸಾಕಷ್ಟು ಜಾನುವಾರುಗಳಿದ್ದು ಈ ಜಾನುವಾರುಗಳಲ್ಲಿ ಸರಿ ಸುಮಾರು 64 ಹಸುಗಳು ಚರ್ಮ ರೋಗ ಗಂಟು ರೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಬನವಾಸಿಯ ಬಾಗದ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಅಂತೂ ಈ ರೋಗ ಹೇಳತೀರದಾಗಿದೆ. ಈ ರೋಗವು ಏಷ್ಟು ಭಯಾನಕವಾಗಿವೆ ಎಂದರೆ ಒಂದು ಜನುವರುವಿಗೆ ಬಂದರೆ ಮತ್ತೊಂದು ಸಮೀಪವಿರುವ ಜನುವಾರುವಿಗೆ ಕೇವಲ ಗಾಳಿಯ ಮುಖಾಂತರ ಇಲ್ಲವಾದರೆ ರೋಗ ಬಂದ ಜಾನುವಾರುವಿಗೆ ಕಚ್ಚಿದ ಸೊಳ್ಳೆ ಮತ್ತೊಂದು ಹಸುವಿಗೆ ಕಚ್ಚಿದರೆ ಆ ಹಸುವಿಗೂ ಕೂಡ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಶು ವದ್ಯರು ತಿಳಿಸಿದ್ದಾರೆ . ಈ ತಾಲೂಕಿನಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪಶುಗಳಿಗೆ ಲಸಿಕೆ ಹಾಕಲಾಗಿದ್ದು ಇನ್ನೂ ಉಳಿದ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕುವ ಕೆಲಸ ನಡೆಯುತ್ತಿದೆ.ಇನ್ನೂ ಮುಂದಾದರು ರೈತರ ಬೆನ್ನೆಲುಬಾದ ಜಾನುವಾರುಗಳನ್ನು ಪಶು ಸಂಗೋಪನಾ ಇಲಾಖೆ ಅಧಿಕಾರಿ ವದ್ಯರು ಎಚ್ಚೆತ್ತುಕೊಂಡು ಉಳಿದ ಜಾನುವಾರುಗಳಿಗೆ ಲಸಿಕೆ ನೀಡಿ ಜನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರಾ ಕಾದು ನೋಡಬೇಕಾಗಿದೆ….

ವರದಿ: ಶ್ರೀಪಾದ್ ಹೆಗಡೆ

Related News

error: Content is protected !!