ಲಕ್ನೋ, ಆಗಸ್ಟ್ 10 — ಮಾನವೀಯತೆ ಮರೆತು ಪ್ರಾಣಿಗಳ ಮೇಲೆಯೂ ಹೀನಕೃತ್ಯ ಎಸಗುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಗೋಮತಿ ನಗರದ ಪತ್ರಕರ್ಪುರಂ ಪ್ರದೇಶದಲ್ಲಿ 24 ವರ್ಷದ ಯುವಕ ಬೀದಿ ನಾಯಿಯೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕ್ಯಾಮೆರಾದಲ್ಲಿ ಸೆರೆಸಿಕ್ಕಿದೆ.

ಮಾಹಿತಿಯ ಪ್ರಕಾರ, ಆರೋಪಿಯಾದ ಸೋನು ವಿಶ್ವಕರ್ಮ ಎನ್ನುವವನು ನಾಯಿಗೆ ಆಹಾರ ನೀಡುವ ನೆಪದಲ್ಲಿ ಅದನ್ನು ಹತ್ತಿರಕ್ಕೆ ಕರೆದು, ವಿಶ್ವಾಸಕ್ಕೆ ದ್ರೋಹ ಮಾಡಿ ಹೀನ ಕೃತ್ಯಕ್ಕೆ ಕೈಹಾಕಿದ್ದಾನೆ. ಈ ಘಟನೆ ಆಗಸ್ಟ್ 7ರಂದು ನಡೆದಿದ್ದು, ಸ್ಥಳೀಯರು ಅದನ್ನು ಗುಪ್ತವಾಗಿ ವಿಡಿಯೋಗೆ ದಾಖಲಿಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಸಾರ್ವಜನಿಕ ಆಕ್ರೋಶ ಉಕ್ಕಿ ಹರಿಯಿತು.

‘ಆಸ್ರಾ ದಿ ಹೆಲ್ಪಿಂಗ್ ಹ್ಯಾಂಡ್ಸ್’ ಎಂಬ ಎನ್‌ಜಿಒ ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯ ಮಾಡಿತು. ವಿಡಿಯೋ ವೈರಲ್ ಆದ ಬಳಿಕ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿ, ಪಾಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಮಾಹಿತಿ ತಿಳಿದ ಕೂಡಲೇ ಆರೋಪಿಯಾದ ಸೋನು ವಿಶ್ವಕರ್ಮ ಸ್ಥಳದಿಂದ ಪರಾರಿಯಾಗಿದ್ದರೂ, ಪೊಲೀಸರು ಚುರುಕಾಗಿ ಕಾರ್ಯಚರಣೆ ನಡೆಸಿ ಅವನನ್ನು ವಿನಾಯಕ ಖಂಡ್ ಪ್ರದೇಶದಲ್ಲಿ ಬಂಧಿಸಿದರು. ತನಿಖೆಯಲ್ಲಿ ಅವನು ಹಲವು ದಿನಗಳಿಂದ ಬೀದಿ ನಾಯಿಗಳ ಸುತ್ತಮುತ್ತ ಸಂಚರಿಸುತ್ತಿದ್ದಾನೆಂಬ ಸಂಗತಿ ಬಹಿರಂಗವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗೆ ಪ್ರಾಣಿ ಕ್ರೂರತೆ ಹಾಗೂ ಲೈಂಗಿಕ ಅಪರಾಧಗಳ ಸಂಬಂಧಿತ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಈ ಘಟನೆ ಪ್ರಾಣಿಗಳ ಸುರಕ್ಷತೆ ಹಾಗೂ ಕಾನೂನು ಜಾರಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆಗೆ ಕಾರಣವಾಗಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!