Latest

ಮೋಜಿಗಾಗಿ ಕಳ್ಳತನ ಮಾಡುವ ಫ್ಯಾಮಿಲಿ: ಕಥೆ ಕೇಳಿ ಪೊಲೀಸರೇ ಶಾಕ್

ಸಿಲಿಕಾನ್‌ ಸಿಟಿಯಲ್ಲಿ ಎಷ್ಟೇಲ್ಲಾ ಕಳ್ಳತನ ಪ್ರಕರಣಗಳನ್ನು ನೋಡಿರುತ್ತೇವೆ ಆದರೆ ಮನೆಮಂದಿಯಲ್ಲಾ ಕಳ್ಳತನದ ಕೆಲಸಕ್ಕೆ ಇಳಿಯುವುದು ನೋಡಿದ್ರೆ ಆಶ್ಚರ್ಯವಾಗುತ್ತೆ. ಪಿಕ್ ಪಾಕೆಟ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ತಂಡದ ವಿಚಾರಣೆ ಮಾಡಿದ ಪೊಲೀಸರಿಗೆ ಅವರ ಇಡೀ ಕುಟುಂಬವೇ ಕಳ್ಳತನ ಮಾಡುವ ಕುಟುಂಬ ಎಂದು ತಿಳಿದು ಪೊಲೀಸರೇ ಶಾಕ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಸ್.ಆರ್ ನಗರದ ಪೊಲೀಸರು ಪಿಕ್ ಪಾಕೆಟ್ ಪ್ರಕರಣದಲ್ಲಿ ತಂಡವೊಂದನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ವಿಷಯ ಹೊರಬಿದ್ದಿದೆ. ಗಂಡ, ಹೆಂಡತಿ, ಅಣ್ಣ, ಭಾವ, ಮಕ್ಕಳು ಸೇರಿದಂತೆ ಆ ಕುಟುಂಬದ ಪ್ರತಿಯೊಬ್ಬರು ಕೂಡಾ ಕಳ್ಳರೇ ಆಗಿದ್ದರು. ಕಳ್ಳತನವೇ ಇವರ ಫುಲ್ ಟೈಂ ಜಾಬ್ ಆಗಿತ್ತು. ಅದರಿಂದಲೇ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬ ವಿಷಯವನ್ನು ಕೇಳಿ ಪೊಲೀಸರು ಇಂತಹವರು ಇರುತ್ತಾರ ಎಂದು ದಂಗಾಗಿದ್ದಾರೆ.
ಬನಶಂಕರಿ ನಿವಾಸಿಗಳಾದ ವೇಲು, ಸುಂದರ್‌ರಾಜ್, ಮಹೇಶ್, ಸೇರಿದಂತೆ ಎಲ್ಲರೂ ಬೆಳಗಾದರೆ ಒಟ್ಟಿಗೆ ಒಂದು ಮೀಟಿಂಗ್ ಮಾಡುತ್ತಾರೆ. ಇಂದು ಯಾರು ಯಾವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಯಾವ ಬಸ್ ರೂಟ್ ಅಲ್ಲಿ ಪಿಕ್‌ಪಾಕೆಟ್ ಮಾಡಬೇಕು ಎಂಬುದನ್ನು ನಿರ್ಧರಿಸಿ ಕುಟುಂಬದ ಎಂಟೂ ಜನ ಬೇರೆ ಬೇರೆ ಕಡೆ ತೆರಳುತ್ತಿದ್ದರು. ಅದರಂತೆ ಕೆಲವರು ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದರೆ ಇನ್ನೂ ಕೆಲವರು ರಶ್ ಇರುವ ಬಿಎಂಟಿಸಿ ಬಸ್‌ಗಳಲ್ಲಿ ಹತ್ತಿಕೊಂಡು ಪರ್ಸ್, ಮೊಬೈಲ್‌ಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು.
ಸಂಜೆ ಕದ್ದ ಮಾಲನ್ನು ಮಾರಿ ಬಿಂದಾಸ್ ಜೀವನ ನಡೆಸುತ್ತಿದ್ದರು. ಪರ್ಸ್, ಮೊಬೈಲ್, ಸಣ್ಣ ಪ್ರಮಾಣದ ಹಣಗಳನ್ನು ಕದ್ದರೆ ಜನರು ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ಇಂತಹ ಸಣ್ಣ ಪುಟ್ಟ ವಿಷಯಗಳಿಗೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂಬ ಧೈರ್ಯದ ಮೇಲೆ ಇದನ್ನೇ ಫುಲ್‌ಟೈಂ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇದೀಗ ಖತರ್‌ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago