50ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಪಿಡಿಓ, ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಅಶೋಕ್ ಗೊಂದಿ ಎಂಬಾತನೇ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯನ್ನು ಹೇಳಲಾಗುತ್ತಿದೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ಬಳಿ ಹೋಟೆಲ್ ನಲ್ಲಿ ಪಿಡಿಒ ಅಶೋಕ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಳಿಯಲ್ಲಿ ಬಿದ್ದಿದ್ದಾನೆ. ಪಿಡಿಒ ಅಶೋಕ್ 1 ಲಕ್ಷ 60 ಸಾವಿರದ ಗೋಧಾಮು ನಿರ್ಮಾಣ ಕಾಮಗಾರಿಯ ಮಂಜೂರು ಮಾಡಲು 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಚಿತವಾಗಿ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಶೋಕ್ ನನ್ನು ಬಂಧಿಸಿದ್ದಾರೆ. ಬಂದಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲೂ ಅಶೋಕ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ವರದಿ: ಶಿವರಾಜ್ ಪಿ.ಆರ್.
ಧರ್ಮಸ್ಥಳದಲ್ಲಿ ಬಹಿರಂಗವಾದ ಶವ ಹೂತು ಪ್ರಕರಣದ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಯ ವೇಗವರ್ಧನೆಗಾಗಿ ವಿಶೇಷ ತನಿಖಾ ತಂಡಕ್ಕೆ…
ಬೆಳ್ತಂಗಡಿ, ಜುಲೈ 31 – ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಿಗೂಢವಾಗಿ ಹೂತ ಶವಗಳ ಮಾಹಿತಿ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ…
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲ್ಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕುಡಿಯಲು ಹಣ ಕೇಳಿದ ಮಗನಿಗೆ ತಾಯಿ ನಿಷೇಧಿಸಿದ್ದಕ್ಕೆ…
ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ದಿನದ ಬೆಳಗಿನ ಜಾವ ನಡೆದ ಯುವತಿಯ ಅಪಹರಣ ಪ್ರಕರಣ ಇದೀಗ ಪೊಲೀಸರ ನಿರ್ಲಕ್ಷ್ಯ ಆರೋಪದಿಂದ ಚರ್ಚೆಗೆ…
ಮಂಗಳೂರು ನಗರದಲ್ಲಿ ಮರಳು ಕಳ್ಳ ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ನಡೆಸಿದ ತಪಾಸಣೆಯ ವೇಳೆ…
ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು,…