Latest

ಬೇಕರಿ ತಿನಸು ಪ್ರಿಯರೇ ಎಚ್ಚರ; ಅಯ್ಯಂಗಾರ್ ಬೇಕರಿಯಲ್ಲಿ ಬೂಸ್ಟ್ ಬಂದ ಬ್ರೆಡ್ಡಿನಿಂದ ಕೇಕ್.

ಧಾರವಾಡ : ಜಿಲ್ಲೆಯ ತಾಲೂಕಿನಾದ್ಯಂತ ಹಳ್ಳಿ_ಹಳ್ಳಿಗಳಲ್ಲಿ ತಲೆ ಎತ್ತಿರುವ ಬೆಂಗಳೂರು ಅಯ್ಯಂಗಾರ್ ಬೇಕರಿ ಎಂಬ ತಿನಸಿನ ಉಗ್ರಾಣ… ಇಲ್ಲಿ ಬ್ರೆಡ್, ಕರಿದ ತಿನಸಿನ ಖಾದ್ಯ ಪದಾರ್ಥಗಳು, ಕಲಬೆರಕೆ ಕ್ರೀಮ್ ಬಳಿಸಿದ ಡಿಸೈನ್ ಕೇಕ್, ಒಂದಿಷ್ಟು ಆರೊಗ್ಯಕ್ಕೆ ಮಾದಕವಾದ ರಾಸಾಯನಿಕ ಮಿಶ್ರಿತ ತಂಪಾದ ಪಾಣಿಯಗಳು, ಈ ತರಹದ ತಿನಿಸುಗಳಿಂದ ರಂಗುರಂಗಿನ ಲೈಟ್‌ ಬೆಳಕಿನಿಂದ ಕೂಡಿದ ಉಗ್ರಾಣ.

ಆರೋಗ್ಯ ಇಲಾಖೆಗಳು ಎಷ್ಟೆ ಹೇಳಿದರು ಕೇಳದ ಜನ. ಇದನ್ನೆ ಬಂಡವಾಳ ಮಾಡಿಕೊಂಡ ಇವರುಗಳು ಮನಸ್ಸಿಗೆ ಬಂದಂತೆ ಬೇಜವಾಬ್ದಾರಿತನದಿಂದ ತಯಾರಿಸಿದ ಖಾದ್ಯ ಪದಾರ್ಥಗಳು, ಇದನ್ನು ಉಪಯೋಸುವುದರಿಂದ ಆರೋಗ್ಯದ ಮೇಲೆ ಬಾರಿ ಪ್ರಮಾಣದ ಹಾನಿಕಾರಕ. ಗೊತ್ತಿದ್ದೊ ಗೊತ್ತಿಲ್ಲದೊ ಸಾರ್ವಜನಿಕರು ಮೊರೆಹೊಗಿರುವುದು ಬೆಸರದ ಸಂಗತಿ. ಹಿಗೊಂದು ತಿನಸಿನ ಉಗ್ರಾಣ ವಿಶೇಷವಾಗಿ ಕಂಡಿದ್ದು ಧಾರವಾಡ ಜಿಲ್ಲೆಯ ಹೇಬ್ಬಳ್ಳಿ ಗ್ರಾಮದಲ್ಲಿ ಗ್ರಾಮಪಂಚಾಯತ ಎದರುಗಡೆ ಇರುವ ಕಾಂಪ್ಲೆಕ್ಸ್ ನಲ್ಲಿ ಬೆಂಗಳೂರು ಅಯ್ಯಂಗಾರ್ ಬೆಕರಿ ಕೆಕ್ ಪ್ಯಾಲೆಸ್ ಅಂತಾ ಬೋರ್ಡ ತಗಲಾಕೊಂಡು ಸಾರ್ವಜನಿಕರಿಗೆ ಹಾಡು ಹಗಲಿನಲೆ ವಿಷ ತಿನಸುತ್ತಿದ್ದಾರೆ . ಕಲಬೆರಕೆ ಮಿಶ್ರಿತ ಕ್ರೀಮ್ ಬಳಸಿದ ಕೇಕ್ ಶಿಲ್ಕು ಉಳಿದ ಕೆಟ್ಟ ಬ್ರೇಡ್‌ ಬಳಸಿ ಕೇಕ್ ತಯಾರಿಸಿ ರಾತ್ರಿ ಹೊತ್ತು ಒಯ್ಯುವ ಗ್ರಾಹಕರಿಗೆ ಮೋಸ ಮಾಡುವುದು ಇವರಿಗೆ ಹೊಸದೆನ್ನಲ್ಲ .

ಸಾಮಾನ್ಯವಾಗಿ ರಾತ್ರಿ ಸಮಯದಲ್ಲೆ ಜನ್ಮ ದಿನ ಆಚರಿಸುವುದು. ಹಳ್ಳಿ ಜನ ಜೀವನದ ಶೈಲಿ . ಅದರಂತೆ ದಿನಾಂಕ 16/ 02 / 2023 ರಂದು ಎಲ್ಲರಿಗೂ ತಿಳಿದಿರುವಂತೆ “ಡಿ .ಬಾಸ್ . ದರ್ಶನ ರವರ ಜನ್ಮದಿನವಿದ್ದು ಶಾಲಾ ಮಕ್ಕಳು ಇವರ ಅಂಗಡಿಯಲ್ಲಿ ಕೇಕ್ ಖರಿದಿಸಿದ್ದು ತಂದು ಡಿ ಬಾಸ್ ರವರ ಹುಟ್ಟುಹಬ್ಬವನ್ನು ಆಚರಿಸಿ ಕೇಕ್ ತಿಂದು ಸಂಬ್ರಮಿಸಿದ್ದು ಮರುದಿನ ಇ‌ನ್ನೂಳಿದ ಕೇಕ್ ಬೆಳಕಿನಲ್ಲಿ ನೋಡಿ ಮಕ್ಕಳು ಮುಜಗೂರಗೊಂಡು ವಾಂತಿ ಬೆದಿ ಮಾಡಿಕೊಂಡಿರುತ್ತಾರೆ. ಕೇಕ್ ಮಾಡುವುದಕ್ಕೆ ಬಳಸಿರುವ ಬ್ರೆಡ್ ಒಳಗೆಲ್ಲ ಬೂಸ್ಟ್ ಬಂದು ಕಪ್ಪಾಗಿರುತ್ತದೆ. ರಾತ್ರಿಯ ಸಮಯದಲ್ಲಿ ಮಕ್ಕಳು ಇದನ್ನು ಕ್ರೀಮ್ ಎಂದು ಭಾವಿಸಿ ತಿಂದಿರುತ್ತಾರೆ ಬೆಳಗ್ಗೆ ಎದ್ದು ನೋಡಿದ ಮೇಲೆ ಇವರಿಗೆ ಗೊತ್ತಾಗಿರುವುದು ಕೇಕಿನ ಒಳಗೆಲ್ಲ ಬೂಸ್ಟ್ ಬಂದಿದೆ ಎಂದು.

ಸದ್ಯ ಮಕ್ಕಳಿಗೆ ಯಾವುದೇ ರೀತಿಯ ಆರೊಗ್ಯದಲ್ಲಿ ತೊಂದರೆಯಾಗಿಲ್ಲ. ಈ ವಿಚಾರವನ್ನು ಸ್ಥಳೀಯರು ಪ್ರಶ್ನಿಸಲು ಅಂಗಡಿಯವರ ಬಳಿಗೆ ಹೋದರೆ ಅದಕ್ಕೂ ಇವರಿಗೂ ಸಂಬಂಧವೇ ಇಲ್ಲದವರ ಹಾಗೆ ಅಂಗಡಿಯವರ ವರ್ತಿಸಿದ್ದಾರೆ. ಮುಗ್ದ ಜನರ ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಫುಡ್ ಇನ್ಸ್ಪೆಕ್ಟರ್ ಇಂತಹ ಬೇಜವಾಬ್ದಾರಿ ಅಂಗಡಿ ಮಾಲಕರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ವರದಿ : ಚರಂತಯ್ಯ ಹಿರೇಮಠ

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago