ಬೆಂಗಳೂರು: ಟ್ರಾಫಿಕ್ ಜಾಮ್‌ನ ಮಧ್ಯೆ ನಡೆದ ಸಣ್ಣ ಅಪಘಾತದಿಂದ ಉದ್ಭವಿಸಿದ ಗಲಾಟೆ ದೊಡ್ಡ ಹಂಗಾಮಿಗೆ ಕಾರಣವಾಗಿದೆ. ಬೆಳ್ಳಂದೂರು ವೃತ್ತದಲ್ಲಿ ನಡೆದ ಈ ಘಟನೆಯಲ್ಲಿ ಬಿಹಾರ ಮೂಲದ ಪನ್ಪೂರಿ ಮಿಶ್ರಾ (28) ಎಂಬ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಅಸಭ್ಯವಾಗಿ ವರ್ತಿಸಿದ್ದಾಳೆ. ಘಟನೆಯ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ವಿವರಗಳ ಪ್ರಕಾರ, ಗರ್ಭಿಣಿಯಾಗಿರುವ ಪನ್ಪೂರಿ ಮಿಶ್ರಾ ಸ್ಕೂಟಿಯಲ್ಲಿ ಆಸ್ಪತ್ರೆ ಕಡೆಗೆ ತೆರಳುತ್ತಿದ್ದ ಸಂದರ್ಭ, ಟ್ರಾಫಿಕ್‌ನಲ್ಲಿದ್ದಾಗ ಹಿಂದಿನಿಂದ ಒಂದು ಆಟೋ ಸ್ಕೂಟಿಗೆ ತುಳಿದಿದೆ. ಇದರಿಂದ ಕೋಪಗೊಂಡ ಮಹಿಳೆ ಆಟೋ ಚಾಲಕನೊಂದಿಗೆ ವಾದವಾಡಲು ಆರಂಭಿಸಿದಳು. ಮಾತಿಗೆ ಮಾತು ಬೆಳೆದು ಜಗಳ ಉಲ್ಬಣಗೊಂಡು, ಮಹಿಳೆ ತನ್ನ ಚಪ್ಪಲಿಯಿಂದ ಆಟೋ ಚಾಲಕನಿಗೆ ಹೊಡೆದಿದ್ದಾಳೆ.

ಘಟನೆಯ ವಿಡಿಯೋ ಕೂಡಲೇ  ಹರಡಿದ್ದು, ಇದನ್ನು ಕಂಡ ಅನೇಕರು ಮಹಿಳೆಯ ದುರ್ವ್ಯವಹಾರವನ್ನು ಖಂಡಿಸಿದ್ದಾರೆ. ಮಹಿಳೆ ಎಂದು ಸಹಾನುಭೂತಿ ವ್ಯಕ್ತಪಡಿಸಿದರೂ, ಇತರರು ಸಾರ್ವಜನಿಕವಾಗಿ ಹೀಗೆ ವರ್ತಿಸುವುದು ನ್ಯಾಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪನ್ಪೂರಿ ಮಿಶ್ರಾ ಅವರನ್ನು ಪೊಲೀಸರು ವಿಚಾರಣೆಗಾಗಿ ಕರೆಸಿ ವಿವರಗಳನ್ನು ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಮಹಿಳೆ, “ಕೋಪದಿಂದ ಹೀಗೆ ವರ್ತಿಸಿದೆ,” ಎಂದು ಒಪ್ಪಿಕೊಂಡಿದ್ದಾಳೆ.

Related News

error: Content is protected !!