ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಕೋಟಿಗಟ್ಟಲೆ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ತಾವು ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ (ಚೀಫ್ ಸೆಕ್ರಟರಿ) ಎಂದು ಹೇಳಿಕೊಂಡು, ಜನರನ್ನು ಸುಳ್ಳು ಭರವಸೆ ನೀಡಿ ಹಣ ಪಡೆದಿರುವ ಘಟನೆ ಕಳವಳ ಮೂಡಿಸಿದೆ.

ಆರೋಪಿತರ ದುಷ್ಟಯೋಜನೆ

ಮಂಡ್ಯದ ತಾವರೆಗೆರೆ ನಿವಾಸಿ ವೆಂಕಟೇಶ್ ಮತ್ತು ಶಿವರುದ್ರ ಎಂಬ ಇಬ್ಬರು ಆರೋಪಿ, ಸಾರ್ವಜನಿಕರಿಗೆ ಸರ್ಕಾರಿ ನೇಮಕಾತಿ ಆದೇಶಗಳ ನಕಲಿ ಪ್ರತಿಗಳು, ರಾಜ್ಯಪಾಲರ ಹಾಗೂ ಅಬಕಾರಿ ಸಚಿವರ ನಕಲಿ ಸಹಿಗಳೊಂದಿಗೆ ಭರವಸೆ ನೀಡುತ್ತಿದ್ದರು. ನಿರುದ್ಯೋಗಿ ಯುವಕರು ಮತ್ತು ಅವರ ಪೋಷಕರಿಗೆ “ನಿಮ್ಮ ಮಕ್ಕಳಿಗೆ ಖಾತ್ರಿ ಸರ್ಕಾರಿ ಕೆಲಸ ನೀಡಲಾಗುವುದು” ಎಂದು ಮೋಸ ಮಾಡುತ್ತಿದ್ದರು.

ಹಲವಾರು ಪೋಷಕರ ಬದುಕಿಗೆ ಹೊಡೆತ

ಸ್ವಪ್ನದ ಭವಿಷ್ಯಕ್ಕಾಗಿ ತಮ್ಮ ಸಂಗ್ರಹಿತ ಹಣ ನೀಡಿದ ಹಲವಾರು ಪೋಷಕರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರಿದಾಗ, ಹಣ ವಾಪಸು ಕೊಡುವುದಿಲ ಬೆದರಿಕೆ ಹಾಕುವಂತೆಯೂ ವರದಿಯಾಗಿದೆ.

ಪೊಲೀಸರ ವಿರುದ್ಧ ಗಂಭೀರ ಆರೋಪ

ವಂಚಿತರಾದ ಕೆಲವು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದರೂ, ಆರೋಪಿತ ವೆಂಕಟೇಶ್ ಪೊಲೀಸರಿಗೆ ಲಂಚ ನೀಡಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರು ಎಫ್ಐಆರ್ ದಾಖಲು ಮಾಡದೇ, ಇದನ್ನು ಲಘುವಾಗಿ ತೆಗೆದುಕೊಳ್ಳುತ್ತಿರುವುದಾಗಿ ವಂಚಿತರು ಆರೋಪಿಸುತ್ತಿದ್ದಾರೆ.

ಈ ಪ್ರಕರಣ ಅನೇಕವರಿಗೆ ಜಾಗೃತಿಯನ್ನು ಮೂಡಿಸುವಂತೆ ಮಾಡಿದ್ದು, ಸರ್ಕಾರ ಮತ್ತು ಕಾನೂನು ಸಂಸ್ಥೆಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಂಚಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related News

error: Content is protected !!