ಉತ್ತರ ಕನ್ನಡ/ದಾಂಡೇಲಿ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಪೋಲಿಸ್ ಇಲಾಖೆ ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಲು ವಿಶೇಷ ತಂಡಗಳನ್ನು ರಚಿಸಿ
ಕಾರ್ಯಾಚರಣೆ ಮಾಡುತ್ತಿದ್ದಾರೆ.
ದಾಂಡೇಲಿ ಶಹರ ಪೊಲೀಸ್ ವ್ಯಾಪ್ತಿಯಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದ ಮೇರೆಗೆ ಮನೆಯನ್ನು ಸರ್ಚ ಮಾಡಲು ಸರ್ಚ ವಾರೆಂಟ್ ಅನುಮತಿ ಆದೇಶವನ್ನು ಪಡೆದು. ದಿನಾಂಕ:-05-02-2025 ರಂದು ಬೆಳಗ್ಗೆ 10-00 ಗಂಟೆಗೆ ಕಿಶನ ತಂದೆ ಸುಭಾಸ ಕಂಜರಬಾಟ, ಗಾಂಧಿನಗರ. ದಾಂಡೇಲಿ ಈತನ ಮನೆಯನ್ನು ಶೋಧನೆ ಮಾಡಿದಾಗ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ ಒಟ್ಟು 02 ಖಾಲಿ ಇ-ಸ್ಟಾಂಪ್ ಪೇಪರ್ ಇದ್ದು. ಇ-ಸ್ಟಾಂಪ್ ಪೇಪರ್ಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಂಡು ಬಂದಿದ್ದು, ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು, ಯಾವದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡು ಬಂದ ಹಿನ್ನೆಲೆಯಲ್ಲಿ ಶ್ರೀ ಶ್ರೀನಿವಾಸ ತಂದೆ ಬಾಲಾಸಾಹೇಬ ಸಜ್ಜನ, ಸಹಕಾರ ಸಂಘಗಳ ಸಹಾಯಕ ನಿಭಂದಕರು, ಕಾರವಾರ ಉಪ ವಿಭಾಗ ಕಾರವಾರ ರವರು ನೀಡಿದ ನೀಡಿದ ದೂರಿನಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ವಿನೋದ ತಂದೆ ಸುರೇಶ ಕಂಜರಬಾಟ  ಮೀನೇಕರ ಸಾ॥ ಕಂಜರಬಾಟ, ಗಾಂಧಿನಗರ, ದಾಂಡೇಲಿ ದಿನಾಂಕ:-05-02-2025 ರಂದು ಬೆಳಿಗ್ಗೆ 12-30 ಗಂಟೆಗೆ ಈತನ ಮನೆಯನ್ನು ಶೋಧನೆ ಮಾಡಿದಾಗ. ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದ 1) ಕರ್ನಾಟಕ ಬ್ಯಾಂಕಿನ ಅಕೌಂಟ್ ನಂಬರ 1812500101420501 ನೇದರ ಖಾಲಿ ಚೆಕ್-01 2) ಯೂನಿಯನ್ ಬ್ಯಾಂಕ ಆಫ್ ಇಂಡಿಯಾ ಅಕೌಂಟ ನಂಬರ 012522010001033 ನೇದರ ಖಾಲಿ ಚೆಕ್-01 3) ದಿ ಕೆನರಾ ಡಿಸ್ಟಿಕ್ ಸೆಂಟ್ರಲ್ ಕೊ ಆಪರೇಟಿವ್ ಬ್ಯಾಂಕ್ ಅಕೌಂಟ್ ನಂಬರ -122000084692 ನೇದರ ಬ್ಯಾಂಕಿನ ಖಾಲಿ ಚೆಕ್-01 4) ಕರ್ನಾಟಕ ಬ್ಯಾಂಕ್ ಅ ಅಕೌಂಟ್ ನಂಬರ 1812500101914401 40,000/- ರೂಪಾಯಿ ಅಂತಾ ನಮೂದಿಸಿರುವ ಚೆಕ್-01 5) ಕೆನರಾ ಬ್ಯಾಂಕ್ ಅಕೌಂಟ್ ನಂಬರ 0879108055673 ನೇದರ ಖಾಲಿ ಚೆಕ್-01 ಹೀಗೆ ಒಟ್ಟು 5 ಚೆಕ್ ಗಳು 6) ಸಹಿ ಇರುವ ಖಾಲಿ ಇಂಡಿಮಿನಿಟಿ ಬಾಂಡ -02 7) ಸಹಿ ಇರದ ಇಂಡಿಮಿನಿಟಿ ಬಾಂಡ -01 8) ಹಾಂಡ್ ಲೋನ್ ಅಗ್ರಿಮೆಂಟ್ ಅಂತಾ ಬರೆದಿರುವ ಇಂಡಿಮಿನಿಟಿ ಬಾಂಡ -01 9) ಅಗ್ರಿಮೆಂಟ್ ಅಂತಾ ಬರೆದಿರುವ ಇಂಡಿಮಿನಿಟಿ ಬಾಂಡ -01 ಹೀಗೆ ಒಟ್ಟು 05 ಬಾಂಡುಗಳು 10) ಆರ್.ಸಿ ಕಾರ್ಡಗಳು-04 ಇವುಗಳು ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂದಿಸಿದಂತೆ ಕಂಡು ಬಂದಿದ್ದು ಆಪಾದಿತನು ಮೀಟರ್ ಬಡ್ಡಿ ವ್ಯವಹಾರವನ್ನೆ ಉದ್ಯೋಗವನ್ನಾಗಿ ಮಾಡಿಕೊಂಡು, ಯಾವುದೇ ರೀತಿಯ ಲೈಸೆನ್ಸ್ ಪಡೆಯದೇ, ಮಿತಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿರುವ ಬಗ್ಗೆ ಕಂಡುಬಂದ ಹಿನ್ನೆಲೆಯಲ್ಲಿ ಶ್ರೀ ಶ್ರೀನಿವಾಸ ತಂದೆ ಬಾಲಾಸಾಹೇಬ ಸಜ್ಜನ. ಸಹಕಾರ ಸಂಘಗಳ ಸಹಾಯಕ ನಿಬಂದಕರು, ಕಾರವಾರ ಉಪ ವಿಭಾಗ ಕಾರವಾರ ರವರು ನೀಡಿದ ನೀಡಿದ ದೂರಿನಂತೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಡ ಜನರಿಗೆ ಬಡ್ಡಿ ಆಧಾರದ ಮೇಲೆ ಹಣವನ್ನು ನೀಡಿ ಜನರಿಂದ ಬಡ್ಡಿ ಹಣವನ್ನು ವಸೂಲಿ ಮಾಡುತ್ತಾ ಬಂದಿರುವ ಬಗ್ಗೆ ಸಾರ್ವಜನಿಕರು ಮೌಖಿಕವಾಗಿ ತಿಳಿಸಿದ ಮೇರೆಗೆ.
ವಿಜಯ ತಂದೆ ಸಾಯಣ್ಣ ವೆರುಮಲ ಸಾ॥ ಅಂಬೇಡ್ಕರ ಶಾಲೆ ಹತ್ತಿರ. ಮಾರುತಿ ನಗರ, ದಾಂಡೇಲಿ,
ಮೌಲಾ ಕಲಾಲ  ರಿಕ್ಷಾವಾಲಾ. ಸಾ|| ಆಶ್ರಯ ಕಾಲೋನಿ ಗಾಂಧಿ ನಗರ ದಾಂಡೇಲಿ ದೂರು ದಾಖಲಿಸಿ ಕ್ರಮಕೈಗೊಳ್ಳಲಾಗಿದೆ. ವರದಿ: ಮಂಜುನಾಥ್ ಎಫ್ ಹೆಚ್

error: Content is protected !!