ಉರ್ಫಿ ಜಾವೇದ್ ಧರಿಸುವ ಚಿತ್ರ-ವಿಚಿತ್ರ ಉಡುಪಿನ ಕಾರಣಕ್ಕಾಗಿ ಆಗಾಗ್ಗೇ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡುವ ಉರ್ಫಿ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾನು ಡ್ರೆಸ್​ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಹೇಳಿಕೊಂಡಿದ್ದಳು. ಇದಕ್ಕಾಗಿ ಈಕೆಯನ್ನು ಫ್ಯಾಷನ್​ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ. ಇದೀಗ ಉರ್ಫಿ ಜಾವೇದ್ ರೇಡಿಯೋ ನಶಾ ಪ್ರಶಸ್ತಿ ಸಮಾರಂಭಕ್ಕೆ ವಿಭಿನ್ನ ಶೈಲಿಯ ಉಡುಪು ತೊಟ್ಟು ಹೋಗಿ ಸುದ್ದಿಯಾಗಿದ್ದಾಳೆ.
ಹೊಸ ಶೈಲಿಯ ಉಡುಪು ಧರಿಸಿರುವ ಫೋಟೋವನ್ನು ಉರ್ಫಿ ಜಾವೇದ್ ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹಾವಿನ ಆಕಾರದ ಬ್ಯಾಕ್‌ಲೆಸ್ ಬಟ್ಟೆಯನ್ನು ಉರ್ಫಿ ಧರಿಸಿದ್ದಾಳೆ. ಇನ್ಸ್​ಟಾಗ್ರಾಂ ಪೋಸ್ಟ್‌ಗೆ ‘ನಾಗಿನ್ ಆಡಿಷನ್ ಚಲ್ ರಹೇ ಹೈ ಕ್ಯಾ? ಎಂದು ಬರೆದುಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್‌ಗೆ ಸಖತ್‌ ಕ್ರೇಜ್ ಮತ್ತು ಫಾಲೋಯಿಂಗ್ ಇದೆ. ಉರ್ಫಿಯ ಹೊಸ ಅವತಾರ ಕಂಡು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ. ಇದೀಗ ನಾಗಿನ್‌ ಲುಕ್‌ನಲ್ಲಿರುವ ಉರ್ಫಿ ವೀಡಿಯೋ ವೈರಲ್‌ ಆಗುತ್ತಿದೆ.

 

View this post on Instagram

 

A post shared by Uorfi (@urf7i)

Related News

error: Content is protected !!