
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ 2026–27ನೇ ಸಾಲಿನಲ್ಲಿ ಸರ್ಕಾರದಿಂದ ವಿತರಿಸಲಾಗಿರುವ ಶೂ ಮತ್ತು ಸ್ಯಾಂಡಲ್ಗಳ ಗುಣಮಟ್ಟದ ಕುರಿತು ದೂರುಗಳಿದ್ದರೆ, ಸೆಪ್ಟೆಂಬರ್ 18ರೊಳಗೆ ಕರ್ನಾಟಕ ಲೋಕಾಯುಕ್ತರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಶಾಲಾ ಮಕ್ಕಳಿಗೆ ಪೂರೈಕೆ ಮಾಡಲಾಗಿರುವ ಶೂ–ಸ್ಯಾಂಡಲ್ಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳ ಪಾಲಕರು ಹಾಗೂ ಪೋಷಕರು ತಮ್ಮ ದೂರುಗಳು ಮತ್ತು ಮಾಹಿತಿಯನ್ನು ಕಾರವಾರದಲ್ಲಿರುವ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಲ್ಲಿಸಬಹುದು.
ದೂರು ಸಲ್ಲಿಸಲು ಸಂಪರ್ಕ ವಿವರಗಳು:
- ದೂರವಾಣಿ: 08382-295293, 08382-220198
- ಇ-ಮೇಲ್: kla-kwrsp-ka@nic.in
- ವಾಟ್ಸ್ಆಪ್: 9364062572, 9364062676, 9364062677
ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಿರುವ ಶೂ ಮತ್ತು ಸ್ಯಾಂಡಲ್ಗಳ ಗುಣಮಟ್ಟದ ಕುರಿತು ಯಾವುದೇ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ, ನಿಗದಿತ ಗಡುವಿನೊಳಗೆ ಲೋಕಾಯುಕ್ತರಿಗೆ ಮಾಹಿತಿ ನೀಡುವಂತೆ ಕಾರವಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






