ಮುಂಡಗೋಡ: ಅಪರಾಧ ಚಟುವಟಿಕೆಗಳಲ್ಲಿ
ಪಾಲ್ಗೊಂಡಿದ್ದ ಮುಂಡಗೋಡ ತಾಲೂಕಿನ ಇಬ್ಬರನ್ನು ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ ಎನ್ ಆದೇಶದ ಮೇರೆಗೆ ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ.
ಅಪರಾಧ ಹಿನ್ನೆಲೆಯನ್ನು ಬಂಡವಾಳವಾಗಿರಿಸಿಕೊಂಡು ಮುಂಡಗೋಡ ಮಾಡುವ ಮೂಲಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನು ತಂದು ಸಾರ್ವಜನಿಕ ಶಾಂತಿ, ನೆಮ್ಮದಿ. ಸೌಹಾರ್ದತೆಗೆ, ಆಸ್ತಿಪಾಸ್ತಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟು ಮಾಡಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ಅವರು ಗಡಿಪಾರಿಗೆ ವಿವರವಾದ ಸೂಕ್ತ ಪ್ರಸ್ತಾವನೆ ಅರ್ಜಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದ್ದರು.

ಗಡಿಪಾರು ಪ್ರಸ್ತಾವನೆ ಅರ್ಜಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಾದ ಮತ್ತು ಪ್ರತಿವಾದಗಳನ್ನು ಆಲಿಸಿ ಗಡಿಪಾರು ಮಾಡುವುದು
ಅವಶ್ಯವೆಂದು ಕಂಡುಬಂದಿದ್ದರಿಂದ ದಿನಾಂಕ:-27/06/2026 ರಂದು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ: 55(ಎ) (ಬಿ) ರಡಿಯಲ್ಲಿ ಮಧುಸಿಂಗ್ ತಂದೆ ಗಂಗಾರಾಮಸಿಂಗ್ ರಜಪೂತ ಈತನಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯ ಮಂಡ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ತಕ್ಷಣದಿಂದ ಜಾರಿಗೆ ಬರುವಂತೆ 06 ತಿಂಗಳುವರೆಗೆ ಗಡಿಪಾರು ಮಾಡಿ ಆದೇಶಿಸಿರುತ್ತಾರೆ, ಅದರಂತೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಮಂಜುನಾಥ್ ಅರ್ಜುನ್ ನವಲೆ ಎಂಬಾತನನ್ನು ಕೋಲಾರ ಜಿಲ್ಲೆಯ ರಾಬರ್ಟ್ ಸನ್ ಪೊಲೀಸ್ ಠಾಣೆ ವ್ಯಾಪ್ತಿಗೆ 06 ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ನೀಡಿರುತ್ತಾರೆ.

ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕಟಿಬದ್ದವಾಗಿರುವ ಎಸ್ಪಿ ದೀಪನ್ ಎಂ ಎನ್ ಅವರು ಖಡಕ್ ನಿರ್ಣಯಗಳ ಮೂಲಕ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಪ್ರಕ್ರಿಯೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!