ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು ಹೋದ ಬಳಿಕ ನವಜಾತ ಶಿಶುವಿನ ಆರೈಕೆ ಹೇಗೆ ಮಾಡಬೇಕು ಎಂಬುದೇ ತಿಳಿಯದೆ ಆತ ಅನುಭವಿಸಿದ ನೋವು ನೋಡುಗರ ಕಣ್ಣಲ್ಲೂ ನೀರು ತರಿಸುತ್ತಿದೆ.

ವಿಡಿಯೊದಲ್ಲಿ ಕಾಣಿಸುವಂತೆ, ಹಾಲಿನ ಪುಡಿ ಖರೀದಿಸಲು ಫಾರ್ಮಸಿಗೆ ಬಂದ ತಂದೆ, ಅಲ್ಲಿನ ಸಿಬ್ಬಂದಿಯನ್ನು ಉದ್ದೇಶಿಸಿ, “ಅಣ್ಣ, ಇದನ್ನು ನನ್ನ ಮಗಳಿಗೆ ಹೇಗೆ ಕುಡಿಸಬೇಕು? ಆಕೆಯ ತಾಯಿ ಇದ್ದಿದ್ದರೆ ಹೇಗೆ ತಯಾರಿಸಬೇಕೆಂದು ತಿಳಿಯುತ್ತಿತ್ತು” ಎಂದು ಕೇಳುವ ಕ್ಷಣ ಅನೇಕರ ಹೃದಯ ಮುಟ್ಟಿದೆ.

ಬಳಿಕ ಕಣ್ಣೀರನ್ನು ತಡೆದುಕೊಳ್ಳಲಾಗದೆ, “ನನ್ನ ಹೆಂಡತಿ ಮತ್ತೊಬ್ಬನ ಜೊತೆ ಹೋಗಿದ್ದಾಳೆ” ಎಂದು ಹೇಳುವಾಗ, ಒಬ್ಬ ತಂದೆಯ ಅಸಹಾಯಕತೆ, ಮುರಿದ ನಂಬಿಕೆ ಮತ್ತು ಪುಟ್ಟ ಮಗುವಿನ ಭವಿಷ್ಯದ ಚಿಂತೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ಈ ಘಟನೆ ಕೇವಲ ಒಬ್ಬ ವ್ಯಕ್ತಿಯ ನೋವಷ್ಟೇ ಅಲ್ಲ, ಕುಟುಂಬ ಸಂಬಂಧಗಳ ಮಹತ್ವ ಮತ್ತು ಮಕ್ಕಳ ಮೇಲಿನ ಪಾಲಕರ ಜವಾಬ್ದಾರಿಯ ಕುರಿತು ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೊ ನೋಡಿ ಅನೇಕರು ತಂದೆಯ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸುತ್ತಿದ್ದು, ಮಗುವಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತಿದ್ದಾರೆ.

Related News

error: Content is protected !!