ಒಮ್ಮೆ ತನ್ನ ಪ್ರತಿಭೆಯಿಂದ ರಾಜ್ಯದ ಹೆಮ್ಮೆಯಾಗಿ ಗುರುತಿಸಿಕೊಂಡಿದ್ದ ಯುವ ಅಧಿಕಾರಿ, ಇದೀಗ ಭ್ರಷ್ಟಾಚಾರದ ಆರೋಪದಲ್ಲಿ ಸುದ್ದಿಯಾಗಿದ್ದಾರೆ. Kajal Meena ಎಂಬ ಲೇಡಿ ಎಸ್‌ಡಿಎಂ, ಭೂಮಿಗೆ ಸಂಬಂಧಿಸಿದ ಕೆಲಸಕ್ಕಾಗಿ 60 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

2024ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ಟೇಟ್ ಟಾಪರ್ ಆಗಿ ಹೊರಹೊಮ್ಮಿದ ಕಾಜಲ್, ತರಬೇತಿ ಪೂರ್ಣಗೊಳಿಸಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಕೇವಲ ಆರು ತಿಂಗಳ ಸೇವಾ ಅವಧಿಯಲ್ಲೇ ಅವರು ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿರುವುದು ಚರ್ಚೆಗೆ ಕಾರಣವಾಗಿದೆ.

ಒಬ್ಬ ಬಾಧಿತ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ Anti Corruption Bureau ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಈ ವೇಳೆ ಲಂಚ ಸ್ವೀಕರಿಸುತ್ತಿದ್ದಾಗ ಕಾಜಲ್ ಮೀನಾ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಲಾಗಿದೆ.

ರಾಜ್ಯಕ್ಕೆ ಹೆಮ್ಮೆಯಾದ ಟಾಪರ್ ಈಗ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Related News

error: Content is protected !!