ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಿಲ್ಲೋದ್ ತಾಲೂಕಿನ ಹಳ್ಳಿಯೊಂದರಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮಧ್ಯರಾತ್ರಿ ಮನೆಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ನಡೆಸಿ, ಆಕೆಯ ಪತಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.

ಶುಕ್ರವಾರ ರಾತ್ರಿ ಮಹಿಳೆ ಮನೆಯಲ್ಲಿದ್ದ ವೇಳೆ ಆರೋಪಿಗಳು ಬಲವಂತವಾಗಿ ಒಳನುಗ್ಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಪತಿ, ಆರೋಪಿಗಳ ವಿರುದ್ಧ ಹೋರಾಟ ನಡೆಸಿ ಪತ್ನಿಯನ್ನು ರಕ್ಷಿಸಲು ಯತ್ನಿಸಿದ್ದಾರೆ.

ಈ ವೇಳೆ ಆರೋಪಿಗಳು ಪತಿಯನ್ನು ಮನಸೋಇಚ್ಛೆ ಥಳಿಸಿದ್ದು, ಈ ಹಲ್ಲೆ ಹಾಗೂ ಘಟನೆಯ ಆಘಾತದಿಂದ ಪತಿಗೆ ಹೃದಯಾಘಾತ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದರೆಂದು ತಿಳಿದುಬಂದಿದೆ.

ಘಟನೆ ನಂತರ ಧೈರ್ಯ ತೋರಿದ ಮಹಿಳೆ ಸಿಲ್ಲೋದ್ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

Related News

error: Content is protected !!