ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್

ಬೆಂಗಳೂರು ನಗರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವರದಕ್ಷಿಣೆಗಾಗಿ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಪತಿ, ಹಣ ಸಿಗದ ಕಾರಣ ಆಕೆಯ ಖಾಸಗಿ ಚಿತ್ರಗಳನ್ನು ವಾಟ್ಸಾಪ್‌ ಗುಂಪಿನಲ್ಲಿ ಹಂಚಿ ಅವಮಾನಿಸಿದ ಘಟನೆ ವರದಿಯಾಗಿದೆ.

ಮಾಹಿತಿಯ ಪ್ರಕಾರ, ರಾಜಸ್ಥಾನ ಮೂಲದ ದಂಪತಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಪತಿಯು “ನಾನು ವ್ಯವಹಾರ ಆರಂಭಿಸಬೇಕಾಗಿದೆ, ಅದಕ್ಕಾಗಿ ನಿನ್ನ ತವರು ಮನೆಯಿಂದ 4 ಕೋಟಿ ರೂಪಾಯಿ ತರಬೇಕು” ಎಂದು ಪತ್ನಿಗೆ ಒತ್ತಡ ಹಾಕುತ್ತಿದ್ದ. ಪತ್ನಿ ಹಣ ತರಲು ನಿರಾಕರಿಸಿದಾಗ, ಅವಳ ವೈಯಕ್ತಿಕ ಫೋಟೋಗಳನ್ನು ವೈರಲ್ ಮಾಡುವ ಮೂಲಕ ಅವಳನ್ನು ಅವಮಾನಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪತ್ನಿ ನೇರವಾಗಿ ಪತಿಯನ್ನು ಪ್ರಶ್ನಿಸಿದಾಗ, ಅವನು ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪವೂ ಕೇಳಿ ಬಂದಿದೆ.

ಘಟನೆಯ ಸಂಬಂಧಿತವಾಗಿ ಮಹಿಳೆ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪತಿ ವಂದೇಮಾತರಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಸ್ತುತ ಆರೋಪಿಯ ವಿರುದ್ಧ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!