ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ. ಆಕೆಯ ಪಕ್ಕದಲ್ಲೇ ಮತ್ತೊಬ್ಬ ಯುವಕ ಕೂಡ ಇದ್ದಾನೆ.

ಮಹಿಳೆಯನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಆಕೆಯು ಮೀರತ್ ಮೂಲದವಳಾಗಿದ್ದಾಳೆ. ಹಿಂಸೆಗೆ ಒಳಗಾದ ವ್ಯಕ್ತಿ ಅಮಿತ್ ಆರ್ಯ ಎಂದು ಪತ್ತೆಯಾಗಿದೆ. ಮೂಲಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ನಂತರ ಜ್ಯೋತಿ, ಅಮಿತ್‌ನನ್ನು ಬಿಜ್ನೋರ್‌ಗೆ ಬರಲು ಆಹ್ವಾನಿಸಿದ್ದಳು. ಆದರೆ ಅಲ್ಲಿಗೆ ಬಂದ ಬಳಿಕ, ಜ್ಯೋತಿ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಅಮಿತ್‌ ಮೇಲೆ ದಾಳಿ ನಡೆಸಿದ್ದಾಳೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಹೊರಬಂದ ನಂತರ ಪ್ರದೇಶದಲ್ಲಿ ಚರ್ಚೆ ಹುಟ್ಟಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!