ಇತ್ತೀಚೆಗೆ ಒಂದು ಭಯಾನಕ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದವರನ್ನು ನಡುಗಿಸುವಂತಿದೆ. ಮನೆಯ ಕಾಂಪೌಂಡ್ ಒಳಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ನಾಲ್ಕೈದು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ ದೃಶ್ಯಗಳು ಆಘಾತ ಮೂಡಿಸಿವೆ.

ಹಾರರ್ ಸಿನಿಮಾದ ದೃಶ್ಯವನ್ನು ಹೋಲುವ ಈ ವೀಡಿಯೋದಲ್ಲಿ, ಬಾಲಕಿಯನ್ನು ನೆಲಕ್ಕುರುಳಿಸಿ ನಾಯಿಗಳು ಹಿಂಸಾತ್ಮಕವಾಗಿ ಕಚ್ಚುತ್ತಿರುವುದು, ಕೆರೆಯುತ್ತಿರುವುದು ಕಾಣಿಸುತ್ತದೆ. ಬಾಲಕಿ ತಾನು ಬಚಾವಾಗಲು ಪ್ರಯತ್ನಿಸುತ್ತಿದ್ದರೂ, ಅವಳ ಪ್ರಯತ್ನಗಳು ಫಲಕಾರಿಯಾಗುವುದಿಲ್ಲ. ಆಕೆಯ ನಡುಗುವ, ಬಯಪಡುವ ನೋಟಗಳನ್ನು ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ.

ಅಷ್ಟರಲ್ಲಿ ಮನೆಯೊಳಗಿಂದ ಒಬ್ಬ ವ್ಯಕ್ತಿ ಧಾವಿಸಿ ಬಂದು ನಾಯಿಗಳನ್ನು ಓಡಿಸಲು ಮುಂದಾಗುತ್ತಾರೆ. ತಕ್ಷಣವೇ ಒಬ್ಬ ಮಹಿಳೆಯೂ ಸ್ಥಳಕ್ಕೆ ಬಂದು ಸಹಾಯ ಮಾಡುವಾಗ, ನಾಯಿಗಳು ಅಲ್ಲಿಂದ ಪರಾರಿಯಾಗುತ್ತವೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ನೆಟಿಜನರು ನಾಯಿಗಳ ಹಿಂಸಾತ್ಮಕ ನಡವಳಿಕೆಯನ್ನು ಖಂಡಿಸಿದ್ದಾರೆ. ಇಂತಹ ಘಟನೆಗಳು ಮಕ್ಕಳ ಸುರಕ್ಷತೆಯ ಕುರಿತ ಚಿಂತೆಗಳನ್ನು ಮತ್ತಷ್ಟು ಹೆಚ್ಚಿಸಿವೆ.

ನಾಯಿಗಳ ಹೆಚ್ಚುತ್ತಿರುವ ದಾಳಿ ಪ್ರಕರಣಗಳನ್ನು ತಡೆಯಲು ಸಂಬಂಧಿತ ಅಧಿಕಾರಿಗಳು ಗಂಭೀರ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹ ವ್ಯಕ್ತಪಡಿಸಿದ್ದಾರೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!