ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ…” — ಗುರುಗಳಿಗೆ ಪರಬ್ರಹ್ಮನ ಸ್ಥಾನ ನೀಡುವ ಈ ಶ್ಲೋಕ ಶತಮಾನಗಳಿಂದ ಗೌರವದ ಸಂಕೇತ. ಆದರೆ, ಇಂದಿನ ಸಮಾಜದಲ್ಲಿ ಈ ಭಾವನೆ ಕೇವಲ ಪುಸ್ತಕದ ಪುಟಗಳಲ್ಲಿ ಮಾತ್ರ ಸೀಮಿತವಾಗುತ್ತಿರುವಂತಿದೆ. ಇತ್ತೀಚೆಗೆ ವೈರಲ್ ಆದ ಘಟನೆಯೊಂದು ಈ ಆತಂಕವನ್ನು ಮತ್ತಷ್ಟು ಗಾಢಗೊಳಿಸಿದೆ.

ಥೈಲ್ಯಾಂಡಿನ ಒಂದು ಶಾಲೆಯಲ್ಲಿ ಆಗಸ್ಟ್ 5ರಂದು ನಡೆದ ಈ ಘಟನೆ ವಿದ್ಯಾರ್ಥಿ–ಗುರು ಸಂಬಂಧದ ಗಂಭೀರ ಹೀನತೆಯನ್ನು ಬಯಲಿಗೆಳೆದಿದೆ. 20 ಅಂಕಗಳ ಪರೀಕ್ಷೆಯಲ್ಲಿ 18 ಅಂಕ ಪಡೆದಿದ್ದ ವಿದ್ಯಾರ್ಥಿ, ಅಂಕ ಕಡಿತವಾದ ಕಾರಣಕ್ಕೆ ತರಗತಿಗಳ ಮಧ್ಯೆಯೇ ಗಣಿತ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದಾನೆ. ತರಗತಿಯಲ್ಲಿ ಅಳವಡಿಸಿದ ಸಿಸಿಟಿವಿ ದೃಶ್ಯದಲ್ಲಿ ವಿದ್ಯಾರ್ಥಿ ಮೊದಲು ಶಿಕ್ಷಕಿಯ ತಲೆಗೆ ಕೈಯಿಂದ ಹೊಡೆದು, ನಂತರ ಕಾಲಿನಿಂದ ಒದ್ದಿರುವ ದೃಶ್ಯಗಳು ದಾಖಲಾಗಿವೆ.

ಈ ದಾಳಿಯಿಂದ ಶಿಕ್ಷಕಿಯ ಎಡ ಕಣ್ಣಿಗೆ ಗಾಯವಾಗಿದ್ದು, ತಲೆಯ ಒಂದು ಭಾಗ ಊದಿಕೊಂಡಿದೆ. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲಾ ಆಡಳಿತ ಮಂಡಳಿಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿತ ವಿದ್ಯಾರ್ಥಿಯನ್ನು ತಕ್ಷಣವೇ ಅಮಾನತುಗೊಳಿಸಿದೆ.

ಇಂತಹ ಘಟನೆಗಳು, ಗುರು–ಶಿಷ್ಯ ಸಂಬಂಧದ ಪವಿತ್ರತೆಯನ್ನು ಕಾಪಾಡುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲೆ ಎಷ್ಟು ದೊಡ್ಡದಿದೆ ಎಂಬುದನ್ನು ನೆನಪಿಸುವಂತಿವೆ.

error: Content is protected !!