ಮಂಗಳೂರು: ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಲೈಂಗಿಕ ದಂಧೆ ನಡೆಯುತ್ತಿರುವ ಬೆಚ್ಚಿಬೀಳಿಸುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹಂಪನಕಟ್ಟೆಯಲ್ಲಿರುವ ‘ವೈಬ್ಸ್ ಯೂನಿಸೆಕ್ಸ್ ಸಲೂನ್’ ಮಾಲಕಿ ತೃಪ್ತಿ ಭಂಡಾರಿ ಹಾಗೂ ಪತಿ ವಿಪಿನ್ ಭಂಡಾರಿ, ಮಹಿಳಾ ಸಿಬ್ಬಂದಿಯನ್ನು ಪುರುಷ ಗ್ರಾಹಕರಿಗೆ ಲೈಂಗಿಕ ಸೇವೆ ನೀಡಲು ಬಲವಂತಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಸಂತ್ರಸ್ತೆಯೊಬ್ಬರಿಂದ ಹೊರಬಿದ್ದಿದೆ.
ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಸಂತ್ರಸ್ತೆಯ ಪ್ರಕಾರ, ಪುರುಷ ಗ್ರಾಹಕರು ಬಂದಾಗ ಮಸಾಜ್ ನೀಡಬೇಕು ಎಂದು ಮಾಲಕರು ನಿರಂತರ ಒತ್ತಡ ಹಾಕುತ್ತಿದ್ದರು. ನಿರಾಕರಿಸಿದಾಗ ಬೆದರಿಕೆ ಹಾಕಿ ಕೆಲಸ ಮಾಡಲು ಬಲವಂತ ಮಾಡುತ್ತಿದ್ದರು. ಇತ್ತೀಚೆಗೆ, ಬ್ಯೂಟಿ ಪಾರ್ಲರ್‌ನೊಳಗಿನ ಏಕಾಂತ ಕೊಠಡಿಗೆ ಮಸಾಜ್‌ಗೆ ಹೋಗಿದ್ದಾಗ, ಒಬ್ಬ ಪುರುಷ ಗ್ರಾಹಕ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದಂತೆ ತಿಳಿಸಿದರು. ತಾವು ವಿರೋಧ ವ್ಯಕ್ತಪಡಿಸಿದಾಗ, ಮಾಲಕಿ ತೃಪ್ತಿ ಭಂಡಾರಿ ಕೊಠಡಿಗೆ ನುಗ್ಗಿ, ಕಪಾಳಕ್ಕೆ ಬಾರಿಸಿ, ಬಲವಂತವಾಗಿ ಮೇಲುಡುಪು ಕಳಚಿ, ಅರೆನಗ್ನ ಫೋಟೋ ತೆಗೆದಿದ್ದಾರೆಂದು ಆರೋಪಿಸಿದ್ದಾರೆ.
ಈ ಚಿತ್ರವನ್ನು ಮಾಲಕಿ ತಮ್ಮ ಪತಿಗೆ ಕಳುಹಿಸಿದ್ದು, ಇದರಿಂದ ಪತಿ ವಿಚ್ಛೇದನ ಪ್ರಕ್ರಿಯೆ ಆರಂಭಿಸಿರುವುದಾಗಿ ಸಂತ್ರಸ್ತೆ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಸಂತ್ರಸ್ತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಗೆ ವಿಷಯ ತಿಳಿಸಿದ್ದು, ಅವರ ಸಲಹೆಯಂತೆ ಅಧಿಕೃತ ದೂರು ದಾಖಲಾಗಿದೆ. ಬಳಿಕ ಮಹಿಳಾ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸಂಜೆ ಸಲೂನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಗಂಭೀರ ತನಿಖೆ ನಡೆಸಿ, ಸಲೂನ್‌ಗೆ ಬೀಗ ಹಾಕುವ ಸಾಧ್ಯತೆ ಇದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
