ಬೆಂಗಳೂರು: ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದ ಘಟನೆಯೊಂದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು. ರಸ್ತೆ ಬದಿಯಲ್ಲಿ ಬಿಟ್ಟಿದ್ದ ಸೂಟ್‌ಕೇಸ್‌ನಿಂದ ಅಪಾರ ಪ್ರಮಾಣದ ನಗದು ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿದ್ದ ಒಬ್ಬ ಪ್ರಯಾಣಿಕ ತನ್ನ ಮದುವೆ ಖರ್ಚಿಗಾಗಿ ಬ್ಯಾಂಕ್‌ನಿಂದ 30 ಲಕ್ಷ ರೂ. ತೆಗೆಯಲಾಗಿತ್ತು. ಬಸ್ ಮೆಜೆಸ್ಟಿಕ್ ತಲುಪಿದಾಗ ಅವರು ತಮ್ಮ ಸೂಟ್‌ಕೇಸ್‌ ಕಾಣೆಯಾಗಿರುವುದು ಗಮನಿಸಿದರು. ತಕ್ಷಣವೇ ಬಸ್ ಕ್ಲೀನರ್‌ಗೆ ಮಾಹಿತಿ ನೀಡಲಾಯಿತು.

ಇದರ ನಡುವೆ, ಅಮೃತಹಳ್ಳಿ ಜಂಕ್ಷನ್ ಬಳಿ ಕೆಲವರು ಬಸ್‌ನಿಂದ ಇಳಿಯುವಾಗ ತಪ್ಪಾಗಿ ಆ ನಗದು ತುಂಬಿದ ಸೂಟ್‌ಕೇಸ್ ಸಹ ಇಳಿಸಲ್ಪಟ್ಟಿತ್ತು. ತಮಗೆ ಸೇರಿದ ವಸ್ತು ಅಲ್ಲವೆಂದು ಭಾವಿಸಿದವರು ಅದನ್ನು ರಸ್ತೆ ಬದಿಯಲ್ಲಿ ಬಿಟ್ಟು ತೆರಳಿದ್ದರು.

ಸ್ಥಳೀಯರು ಅನುಮಾನಾಸ್ಪದವಾಗಿ ಬಿದ್ದಿದ್ದ ಸೂಟ್‌ಕೇಸ್‌ ನೋಡಿ ಹೊಯ್ಸಳ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಅದರೊಳಗೆ ದೊಡ್ಡ ಪ್ರಮಾಣದ ನಗದು ಇರುವುದನ್ನು ಪತ್ತೆಹಚ್ಚಿದರು.

ನಂತರ, ಬಸ್ ಕ್ಲೀನರ್‌ ಹಾಗೂ ಮಾಲೀಕರು ಅಮೃತಹಳ್ಳಿ ಠಾಣೆಗೆ ಬಂದು, ಬ್ಯಾಂಕ್‌ನಿಂದ ಹಣ ತೆಗೆಯಲಾದ ದಾಖಲೆಗಳನ್ನು ನೀಡಿದರು. ಎಲ್ಲಾ ಪರಿಶೀಲನೆಗಳ ಬಳಿಕ, ಪೊಲೀಸರು 30 ಲಕ್ಷ ರೂಪಾಯಿಗಳ ನಗದು ಮಾಲೀಕರಿಗೆ ಹಸ್ತಾಂತರಿಸಿದರು.

ಈ ಘಟನೆ ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

Related News

error: Content is protected !!