ರಾಯಚೂರು, ಜು.25 – ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದ ಪ್ರಸಿದ್ಧ ಅಮರೇಶ್ವರ ದೇವಾಲಯದ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಅಶ್ಲೀಲ ಚಟುವಟಿಕೆಗಳು ನಡೆಯುತ್ತಿದ್ದ ಆರೋಪಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.
ಭಕ್ತರು ಹಾಗೂ ಪ್ರವಾಸಿಗರಿಗಾಗಿ ಸರ್ಕಾರಿ ಹಣದಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿತ ಈ ಉದ್ಯಾನವನ, ಈಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಉದ್ಯಾನವನವನ್ನು ಸಾರ್ವಜನಿಕರಿಗೆ ವಿಶ್ರಾಂತಿ ಸ್ಥಳವಾಗಿ ಬಳಸಲು ರೂಪಿಸಲಾಗಿತ್ತು. ಆದರೆ, ನಿರ್ವಹಣಾ ಕೊರತೆಯಿಂದ ಜಾಗ ಹಾಳಾಗಿ, ಅಪಪ್ರಯೋಗಕ್ಕೆ ಒಳಗಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಿರಂತರವಾಗಿ ವೇಶ್ಯಾವಾಟಿಕೆ ಮತ್ತು ಅಶ್ಲೀಲ ಕೃತ್ಯಗಳು ನಡೆಯುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಹೊಂದಿಸಿದ ಮಾಹಿತಿಯಂತೆ, ಉದ್ಯಾನವನ ಪ್ರವೇಶಕ್ಕೆ ನಿಗದಿಪಡಿಸಿರುವ 10 ರೂ. ಪ್ರವೇಶ ದರದ ಬದಲಿಗೆ, ಹೊರಗುತ್ತಿಗೆ ನೌಕರರು ಹೆಚ್ಚು ಹಣ ಪಡೆದು ಅನೈತಿಕ ಚಟುವಟಿಗಳಿಗೆ ಅವಕಾಶ ನೀಡುತ್ತಿದ್ದಾರೆ ಎನ್ನಲಾಗಿದೆ.
ಭಕ್ತರ ಭಾವನೆಗೆ ಧಕ್ಕೆ ತರುವ ಈ ಘಟನೆಗಳಿಗೆ ತಕ್ಷಣ ಕಡಿವಾಣ ಹಾಕಬೇಕೆಂದು ಸಂಘಟನೆಯವರು ಒತ್ತಾಯಿಸಿದ್ದು, ಪಾರ್ಕ್‌ನಲ್ಲಿ ಸುಸಜ್ಜಿತ ಭದ್ರತಾ ವ್ಯವಸ್ಥೆ ಹಾಗೂ ನಿಗಾ ಸಾಧನೆಯ ಸ್ಥಾಪನೆಯ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
