ಬೀದರ್: ನಗರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ ನಾಲ್ಕು ವರ್ಷದ ನರ್ಸರಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುರುವಾರ (ಜುಲೈ 24) ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ, ಬಾಲಕಿ ಬುಧವಾರ (ಜುಲೈ 23) ತನ್ನ ಆದಿಯಂತೆ ಶಾಲೆಗೆ ಹಾಜರಾಗಿದ್ದಳು ಮತ್ತು ಸಂಜೆ ಮನೆಗೆ ಮರಳಿದ್ದಳು. ಬಳಿಕ ತಾಯಿ ಶಾಲಾ ಉಡುಪನ್ನು ಬದಲಾಯಿಸುವ ಸಂದರ್ಭದಲ್ಲಿಯೇ ಬಾಲಕಿಯ ಖಾಸಗಿ ಅಂಗದಿಂದ ರಕ್ತಸ್ರಾವವಾಗುತ್ತಿರುವುದು ಗಮನಕ್ಕೆ ಬಂದಿದೆ.
ತಕ್ಷಣವೇ ಆತಂಕಗೊಂಡ ಪೋಷಕರು ಬಾಲಕಿಯನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ವೈದ್ಯಕೀಯ ತಪಾಸಣೆಯ ಬಳಿಕ ವಿಷಯದ ಗಂಭೀರತೆ ಅರಿತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಮಹಿಳಾ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಘಟನೆ ಕುರಿತಂತೆ ಶಾಲಾ ಆಡಳಿತ, ಸಿಬ್ಬಂದಿ ಹಾಗೂ ಬಾಲಕಿಯ ಬಳಿಯವರಿಂದ ಪೊಲೀಸ್ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ವೈದ್ಯಕೀಯ ತಪಾಸಣೆಯಿಂದ ಅತ್ಯಾಚಾರ ನಡೆದಿದೆ ಅಂತ ಗೊತ್ತಾದ ಮೇಲೆಯೊ ನೀವು ಅ ಶಾಲೆಯ ಹೆಸರು ಏಕೆ ಹಾಕಲಿಲ್ಲ.?
ಅ ಶಾಲೆ ಯಾವುದು ಅದರ ಹೆಸರು ಹಾಕಿ
ಎಳೆ ಕಂದಮ್ಮಗಳಿಗೆ ರಕ್ಷಣೆ ಇಲ್ಲದೆ ಇರುವಂತಹ ಇಂತಹ ಶಾಲೆಗೆ ಮುಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸೆರಿಸುವುದಿಲ್ಲ.
ಕಾಮುಕನಿಗೆ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು