ರಾಜೋಳು (ಆಂಧ್ರಪ್ರದೇಶ), ಜುಲೈ 17: ವೇಶ್ಯಾವಾಟಿಕೆಗೆ ತೊಡಗಲು ನಿರಾಕರಿಸಿದ್ದುದೇ ಲಿವ್-ಇನ್ ಸಂಗಾತಿಯ ಕೈಯಲ್ಲಿ ಮಹಿಳೆಯೊಬ್ಬಳ ಭಯಾನಕ ಕೊಲೆಗೆ ಕಾರಣವಾಗಿರುವ ಹೃದಯವಿದ್ರಾವಕ ಘಟನೆ ಬಿ ಸವರಂ ಗ್ರಾಮದಲ್ಲಿ ನಡೆದಿದೆ.
ಮೃತೆಯು ಪುಷ್ಪಾ ಎಂಬವರಾಗಿದ್ದು, ಕಳೆದ ಆರು ತಿಂಗಳಿಂದ ಶೇಖ್ ಶಮ್ಮಾ ಎಂಬಾತನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ತನ್ನ ಪತಿಯಿಂದ ವಿಭಜನೆಯಾದ ಬಳಿಕ ಪುಷ್ಪಾ ಶಮ್ಮಾ ಜೊತೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಬುಧವಾರ ರಾತ್ರಿ ಶಮ್ಮಾ ಪುಷ್ಪಾಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ನಿರಂತರ ಒತ್ತಾಯ ಮಾಡಿದ್ದ. ತನ್ನ ಪ್ಲಾನ್ ಪ್ರಕಾರ ಇದ್ದ ಸ್ಥಳಕ್ಕೆ ಬರಬೇಕೆಂದು ಬಲವಂತಪಡಿಸಿದ್ದ. ಆದರೆ ಪುಷ್ಪಾ ಇದಕ್ಕೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಶಮ್ಮಾ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.
ವಿವಾದ ತಾರಕಕ್ಕೇರಿದಂತೆ ಶಮ್ಮಾ ಅಚ್ಚರಿಯ ಚಟುವಟಿಕೆಗೆ ಒಡ್ಡಿಕೊಂಡಿದ್ದ. ಚಾಕು ತೆಗೆದು ಪುಷ್ಪಾ ಎಡ ಎದೆಯ ಭಾಗ ಹಾಗೂ ಕಾಲಿಗೆ ಇರಿದಿದ್ದಾನೆ. ತಕ್ಷಣವೇ ಪುಷ್ಪಾ ಕುಸಿದು ಬಿದ್ದು, ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.
ಈ ಮಧ್ಯೆ ತನ್ನ ಮಗಳನ್ನು ರಕ್ಷಿಸಲು ಬಂದ ಪುಷ್ಪಾ ತಾಯಿ ಹಾಗೂ ಸಹೋದರನ ಮೇಲೂ ಶಮ್ಮಾ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ಹಲ್ಲೆಯ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶೇಖ್ ಶಮ್ಮಾ ಪತ್ತೆ ಹಚ್ಚಲು ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ಈ ಘೋರ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ
