ಮಂಗಳೂರು, ಜುಲೈ 11: ಅಕ್ರಮ ವಿದೇಶಿ ಕರೆನ್ಸಿ ಹೊಂದಿದ್ದ ಆರೋಪದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ನಡೆದಿದೆ.

ತೌಸಿಫ್ ಅಹಮ್ಮದ್ ಮತ್ತು ಮೋತಿಯಾ ಖೈರುನ್ನಿಸಾ ಎಂಬವರು ಜುಲೈ 11ರಂದು ರಾತ್ರಿ 9.25ಕ್ಕೆ ಇಂಡಿಗೋ ವಿಮಾನದ ಮೂಲಕ ಅಬುಧಾಬಿಗೆ ತೆರಳಲು ಪ್ರಯತ್ನಿಸುತ್ತಿದ್ದರು. ವಿಮಾನ ಹತ್ತುವ ಮೊದಲು ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಪಾಸಣೆಗೊಳಪಡಿಸಿದರು.

ಈ ವೇಳೆ ಅವರ ಬಳಿ ಸುಮಾರು 40,000 ಸೌದಿ ಅರೇಬಿಯನ್ ರಿಯಲ್ ಕರೆನ್ಸಿಯನ್ನು ಪತ್ತೆಹಚ್ಚಲಾಗಿದೆ. ಭಾರತೀಯ ಮೌಲ್ಯದಲ್ಲಿ ಇದು ಸುಮಾರು 9.74 ಲಕ್ಷ ರೂಪಾಯಿ ಆಗುತ್ತದೆ. ಕ್ರಮಬದ್ಧ ದಾಖಲೆ ಇಲ್ಲದೇ ಈ ಹಣವನ್ನು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಕಾನೂನು ಉಲ್ಲಂಘನೆಯ ಮೇರೆಗೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಕುರಿತು ಕಸ್ಟಮ್ಸ್ ಇಲಾಖೆ ತನಿಖೆ ಆರಂಭಿಸಿದ್ದು, ಹಣದ ಮೂಲ ಮತ್ತು ಉದ್ದೇಶ ತಿಳಿಯಲು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Related News

error: Content is protected !!