ಬೆಂಗಳೂರು, ಜುಲೈ 9: ರಾಜ್ಯದ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಮತ್ತೆ ಕಠಿಣ ಕ್ರಮ ಕೈಗೊಂಡಿದ್ದು, ಬುಧವಾರ ಬೆಂಗಳೂರಿನಲ್ಲಿ ವಿವಿಧೆಡೆ ದಾಳಿ ನಡೆಸಲಾಗಿದೆ. ಕರ್ನಾಟಕ ಗೃಹಮಂಡಳಿಯ ಎಂಜಿನಿಯರ್ ಸೇರಿದಂತೆ ಮೂವರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಸಂಯುಕ್ತವಾಗಿ ಸರ್ಚ್ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕಾಯುಕ್ತ ಅಧಿಕಾರಿಗಳ ದಾಳಿಗೆ ಗೃಹಮಂಡಳಿಯ ಎಂಜಿನಿಯರ್ ಸೈಯದ್ ಅಜ್ಗರ್, ಅಧಿಕಾರಿ ಗೋವಿಂದಯ್ಯ ಹಾಗೂ ಹರಣಿ ಸತೀಶ್ ಇವರುಗಳು ಗುರಿಯಾಗಿದ್ದಾರೆ. ಇವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಲೆಕ್ಕಪತ್ರಗಳನ್ನು ಪರಿಶೀಲಿಸಲಾಗುತ್ತಿದೆ.

ಸುಮಾರು ₹10 ಕೋಟಿ ಮೌಲ್ಯದ ಸರ್ಕಾರಿ ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಗಂಭೀರ ಆರೋಪದ ಮೇರೆಗೆ ಈ ದಾಳಿ ನಡೆಯುತ್ತಿದೆ. ಈ ನಡುವೆ ಯಲಹಂಕ ಉಪನಗರದಲ್ಲಿರುವ ಅಜ್ಗರ್‌ನ ನಿವಾಸದಲ್ಲಿ ಹೆಚ್ಚುವರಿ ದಾಖಲೆಗಳು ಪತ್ತೆಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಲೋಕಾಯುಕ್ತದ ಈ ಕ್ರಮದಿಂದ ಭ್ರಷ್ಟಾಚಾರಿಗಳಿಗೆ ಎಚ್ಚರಿಕೆಯಾಗಿದ್ದು, ಅಧಿಕಾರಿಗಳ ಅಕ್ರಮ ಆಸ್ತಿ ಹಾಗೂ ಲೆಕ್ಕಪತ್ರಗಳ ಶೋಧನೆಯು ಇನ್ನಷ್ಟು ಬಹಿರಂಗವಾಗುವ ನಿರೀಕ್ಷೆಯಿದೆ.

Related News

error: Content is protected !!