ಕುಂದಗೋಳ:ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯ 25 ಲಕ್ಷ ರೂಪಾಯಿಗಳ ಲೋಕೋಪಯೋಗಿ ಇಲಾಖೆ ಅನುದಾನದಡಿಯಲ್ಲಿ “ಯಾತ್ರಿ ನಿವಾಸ” ಶಂಕು ಸ್ಥಾಪನೆಗೆ ಶಿರಹಟ್ಟಿಯ ಶ್ರೀ ಮ. ನಿ. ಪ್ರ ಜಗದ್ಗುರು ಪಕ್ಕಿರೇಶ್ವರ ಸಂಸ್ಥಾನ ಮಠದ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರವು ಇಂತಹ ಧಾರ್ಮಿಕ ಕಾರ್ಯಗಳಿಗೆ ಮುಂದಾಗಿರುವುದು ಮಠ ಮಾನ್ಯಗಳು ಉಳಿಯಲು ಸಾದ್ಯ. ಶಿರಹಟ್ಟಿಯ ಜಗದ್ಗುರು ಪಕ್ಕಿರೇಶ್ವರ ಸಂಸ್ಥಾನ ಮಠದ ಶ್ರೀ ಮ. ನಿ. ಪ್ರ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಕುಂದಗೋಳ ತಾಲೂಕಿನ ಮಳ್ಳಹಳ್ಳಿ ಗ್ರಾಮದ ಶ್ರೀ ಚನ್ನವಿರೇಶ್ವರ ವಿರಕ್ತಮಠದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಂಜೂರಾದ 25 ಲಕ್ಷ ರೂಪಾಯಿ ವೆಚ್ಚದ ಯಾತ್ರಿ ನಿವಾಸ ಕಟ್ಟಡದ ಶಂಕು ಸ್ಥಾಪನೆಯನ್ನು ನೆರೆವೆರಿಸಿ ಮಾತನಾಡಿದ ಅವರು ಸರಕಾರ ಮಹತ್ವದ ಯೋಜನೆ ಕಾರ್ಯರೂಪಕ್ಕೆ ತಂದಿದ್ದು ಸಂತೋಷದ ವಿಷಯ ಈ ಮಠದ ಪಾರಂಪಾರಿಕ ಹಿನ್ನೆಲೆ ಇದೆ. ಅಭಿವೃದ್ಧಿಗೆ ಮುನ್ನಡೆ ಪಡೆದುಕೊಂಡಿದೆ ಎಂದರು.
ಮಳ್ಳೂಳ್ಳಿ ಶ್ರೀ ಚನ್ನವಿರೇಶ್ವರ ವಿರಕ್ತಮಠದ ಶ್ರೀ ಮ. ನಿ. ಪ್ರ ಶಿವಯೋಗಿಶ್ವರ ಮಹಾಸ್ವಾಮಿಗಳು ಮಾತನಾಡಿ ಮುಳಹಳ್ಳಿ ಹಾಗೂ ಸುತ್ತು ಮುತ್ತಲಿನ ಗ್ರಾಮಗಳ ಜನೆತೆಯ ಸರ್ವ ಸಹಕಾರದಿಂದ ಈ ಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯತ್ತಾ ಬಂದಿದೆ. ಇವತ್ತು ನಮ್ಮ ಮಠ ಅಭಿವೃದ್ಧಿ ಕಾರ್ಯ ನಡೆಯೋದು ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣಿ ಮತ್ತು ರಪ್ತು ನಿಗಮದ ಅದ್ಯಕ್ಷರು , ಎಸ್ ಐ ಚಿಕ್ಕನಗೌಡ್ರ ಮಾತನಾಡಿ ಶ್ರೀ ಚನ್ನವಿರೇಶ್ವರ ವಿರಕ್ತಮಠಕ್ಕೆ ತಾಲೂಕಿನಾದ್ಯಂತ ಅನೇಕ ಭಕ್ತರಿದ್ದು ಪ್ರಸ್ತುತ ಎಲ್ಲರೂ ಸರ್ವ ಸಮ್ಮತದಿಂದ ಕೂಡಿ ಸೇರಿಕೊಂಡು ಅಭಿವೃದ್ಧಿ ಕಾರ್ಯ ಮುಂದುವರಿಸಿಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ಎಮ್ ಎಸ್ ಅಕ್ಕಿ ಈ ಮಠಕ್ಕೆ ಸಾವಿರಾರು ಭಕ್ತಾ ಸಮೂಹ ಇದ್ದು. ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿ ಗುಣಮಟ್ಟದ ಮತ್ತು ಪೂರ್ಣಗೂಳ್ಳಲ್ಲಿ ಎಂದು ಗುತ್ತಿಗೆದಾರನಗೆ ಕರೆ ನೀಡಿದರು.
ಕಾರ್ಯಕ್ರಮ ಪ್ರಾರಂಭವನ್ನು ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವುದರ ಜೊತೆಗೆ ಕಾರ್ಯಕ್ರಮ ಶೋಬೆ ತಂದರು. ಸ್ವಾಗತ ಭಾಷಣ ರಾಘವೇಂದ್ರ ಕುರಿ ನೆರೆವೆರಿಸಿದರು. ಶಾಂತಯ್ಯ ಮಲಕೈಯ್ಯನವರ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಶಂಕರಗೌಡ ನಿರಂಜನಗೌಡ್ರ, ದಾನಪ್ಪ ಗಂಗಯ್ಯ
ಎ ಬಿ. ಉಪ್ಪಿನ, ಗ್ರಾಮ ಪಂಚಾಯಿತಿ ಅಧ್ಯಕ್ಷರು , ಉಪ್ಯಾದ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಪಕ್ಕಿರಪ್ಪ ಮೂಲಿಮನಿ ಸಿದ್ದಪ್ಪ ಹುಣಸಣ್ಣನವರ, ಬಾಬಣ್ಣ ಬೆಟಗೇರಿ, ಗುರಲಿಂಗಪ್ಪ ಸೂರಟೂರ, ರುದ್ರಗೌಡ್ರ ಚನ್ನಪ್ಪಗೌಡ್ರ, ಸದಾಶಿವಯ್ಯ ಹೀರೆಮಠ, ಆಶೋಕಗೌಡ್ರ ಪಾಟೀಲ, ಪಕ್ಕಿರಪ್ಪ ದೇವನೂರ, ನಾಗಾರಾಜ ಅಳ್ಳಿಕಟ್ಟಿ, ಎಚ್ ಡಿ ಹೀರೆಗೌಡ್ರ, ಅಡಿವೆಪ್ಪ ಸುಣಗಾರ, ಹನಮಂತಗೌಡ್ರ ನಾಗನಗೌಡ್ರ ಜಗದೇವಯ್ಯ ಶಾಸ್ತ್ರೀಯಗಳು, ಶಾನವಾಡ ಅರವಿಂದಪ್ಪ ಮೇಲ್ಮಾಳಗಿ, ಶೇಕಯ್ಯ ಹೀರೆಮಠ, ಮಹದೇವಪ್ಪ ತಟ್ಟಿಮಸಿ, ಬಸುವರೆಡ್ಡಿ ಹಾಗೂ ಊರಿನ ಸಧ್ಭಕ್ತರು ಪಾಲ್ಗೊಂಡಿದರು.
ಶಾನು ಯಲಿಗಾರ
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…
ರೈಲಿನ ಶೌಚಾಲಯದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಒಂದು ವಿಡಿಯೊ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಮೊದಲು ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಶೌಚಾಲಯದಿಂದ…
ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು ಬಿಗಿ ನಿಗಾವಹಿಸುತ್ತಿರುವಾಗ, ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡ್ರಗ್ ಪೆಡ್ಲರ್ ಪಾತ್ರ…
ಹೆರಾತ್ (ಅಫ್ಘಾನಿಸ್ತಾನ), ಆಗಸ್ಟ್ 20 – ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ.…
ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್‌ನ ರಾಜ್‌ಕೋಟ್ ಮೂಲದ ರಾಜೇಶ್ ಸಕ್ರಿಯಾ…